March 4, 2026
WhatsApp Image 2024-05-31 at 12.16.25 PM

ಮಣಿಪಾಲ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಗ್ಯಾಂಗ್ ವಾರ್ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ತಡರಾತ್ರಿ ಸಮಯ ಮೀರಿ ವಹಿವಾಟು ನಡೆಸುವ ಉದ್ಯಮಗಳನ್ನು ಪರಿಶೀಲಿಸಿ ಎಚ್ಚರಿಕೆ ನೀಡಲಾಗಿದೆ.

ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ಪಬ್, ಬಾರ್‌ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಕಾನೂನು ಉಲ್ಲಂಘಿಸಿದಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಮಣಿಪಾಲದಲ್ಲಿ ಗಾಂಜಾ, ಡ್ರಗ್ಸ್ ಜಾಲವೂ ಸಕ್ರಿಯವಾಗಿದೆ. ಯುವಜನರನ್ನು ಗುರಿಯಾಗಿಸಿ ಇಲ್ಲಿ ಡ್ರಗ್ಸ್ ಮತ್ತು ಗಾಂಜಾ ವ್ಯವಹಾರ ನಡೆಯುತ್ತಿದೆ. ಪೊಲೀಸರು ಇದರ ಮೇಲೂ ಕಣ್ಣಿಟ್ಟಿದ್ದು ಎಲ್ಲೆಡೆ ತಪಾಸಣೆ ಮಾಡುತ್ತಿದ್ದಾರೆ. ಇನ್ನೊಂದೆಡೆ ರಾತ್ರಿ ಹತ್ತರ ಬಳಿಕ ಪಬ್, ಬಾರ್‌ಗಳ ಮೇಲೆ ದಾಳಿ ನೆಪದಲ್ಲಿ ಸಣ್ಣಪುಟ್ಟ ಗೂಡಂಗಡಿ ಮತ್ತು ಅಂಗಡಿ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

About The Author

Leave a Reply

Your email address will not be published. Required fields are marked *

You cannot copy content of this page.