
ಉಡುಪಿ: ಫೆ24ರಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆಜಾದ್ ಹಿಂದ್ ಕಾರ್ಯಕ್ರಮ ನಡೆಯಲಿದೆ ಎಂದು ಕೂರ್ಮ ಫೌಂಡೇಶನ್ ಇದರ ಶ್ರೀಕಾಂತ್ ಶೆಟ್ಟಿ ತಿಳಿಸಿದರು.

ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಹೋದವರು “ಶಿವಾಜಿ” ಎಂಬ ಇತಿಹಾಸದ ಸತ್ಯವನ್ನು ದಾಖಲೆ ಸಮೇತ ತಿಳಿಸಿದವರು ಸಂದೀಪ್ ಮಹಿಂದ್. ಉತ್ತಮ ವಾಗ್ಮಿ ಗಳಾಗಿರುವ ಇವರು ರಾಷ್ಟ್ರೀಯ ಏಕತೆಯ ಉಳಿವಿಗಾಗಿ ದುಡಿಯುತ್ತಿದ್ದಾರೆ.
ಅಜಿತ್ ಹನುಮಕ್ಕನವರ್:- ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯ ಮುಖ್ಯಸ್ಥರು ಮತ್ತು ನಿರೂಪಕರಾಗಿ ಜನ ಮನ್ನಣೆ ಗಳಿಸಿರುವ ಇವರು ತನ್ನ ವಿಭಿನ್ನ ಚರ್ಚಾ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ತುಂಬ ಮನೆಮಾತಾಗಿರುತ್ತಾರೆ. ನಮ್ಮ ಕಾರ್ಯಕ್ರಮದಲ್ಲಿ ಇವರು ನೇತಾಜಿ ಮತ್ತು ಶಿವಾಜಿ ಅವರ ವ್ಯಕ್ತಿತ್ವದಲ್ಲಿರುವ ತುಲನಾತ್ಮಕ ವಿಚಾರಗಳನ್ನು ಮಂಡಿಸಲಿದ್ದಾರೆ.
ಕೂರ್ಮ ಫೌಂಡೇಶನ್ ಇದರ ಶ್ರೀಕಾಂತ್ ಶೆಟ್ಟಿ, ಅಜಯ್ ಪಿ.ಶೆಟ್ಟಿ, ಪ್ರವೀಣ್ ಯಕ್ಷಿಮಠ, ಸುಜಿತ್ ಶೆಟ್ಟಿ, ಸೂರಜ್ ಕಿದಿಯೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
