ದುಬೈ : ಬಿಗ್ ಬಾಸ್ ಸ್ಪರ್ಧಿ , ತನ್ನ ವಿಭಿನ್ನ ಡ್ರೆಸ್ ಗಳಿಂದ ಸದಾ ಪ್ರಚಾರದಲ್ಲಿ ಮಾಡೆಲ್ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿರುವ ಉರ್ಫಿ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಉರ್ಫಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ದುಬೈನಲ್ಲಿ, ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
TOI ವರದಿ ಪ್ರಕಾರ ಉರ್ಫಿ ಧರಿಸಿದ ಬಟ್ಟೆ ಬಗ್ಗೆ ಯಾವುದೇ ವಿವಾದವಾಗಿಲ್ಲ, ಆದರೆ ದುಬೈನ ನಿರ್ಬಂಧಿತ ಪ್ರದೇಶದಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದಳು, ಈ ಸ್ಥಳದಲ್ಲಿ ಈ ರೀತಿಯ ಬಟ್ಟೆ ಧರಿಸಿ ವಿಡಿಯೋ ಶೂಟ್ ಮಾಡುವ ಅವಕಾಶ ಇಲ್ಲ ಎಂದು ಹೇಳಲಾಗಿದ್ದು, ಈ ಹಿನ್ನಲೆ ದುಬೈ ಪೊಲೀಸರು ಉರ್ಫಿ ಜಾವೇದ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.