ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ 12 ವಾರಕ್ಕೆ ಹೊರಬಿದ್ದಿದ್ದಾರೆ. ಈ ಮೂಲಕ ಎರಡನೇ ಬಾರಿ ದೊರೆತ ಅವಕಾಶದಲ್ಲಿ ಮಿಂಚಿದರೂ ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಕಲರ್ಸ್ ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನುಪಮಾ ಗೌಡ ಬಿಗ್ ಬಾಸ್ ಮನೆಯಲ್ಲಿ 12 ವಾರಗಳ ಕಾಲ ಉಳಿದಿದ್ದರು.
ಇದರಿಂದ ಅವರು ಗಳಿಸಿದ ಸಂಭಾವನೆ ಎಷ್ಟು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.
ಸಾಮಾನ್ಯವಾಗಿ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಲು ವಾರಕ್ಕೆ 10 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಅದಕ್ಕೆ ಹೋಲಿಸಿದರೆ ಅನುಪಮಾ ಗೌಡಕ್ಕೆ ತುಂಬಾ ಕಡಿಮೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಅನುಪಮಾ ಗೌಡಗೆ ವಾರಕ್ಕೆ 40 ಸಾವಿರ ರೂ. ಶುಲ್ಕ ನಿಗದಿಯಾಗಿದ್ದು, 12 ವಾರಗಳ ಕಾಲ ಇದ್ದ ಅವರಿಗೆ ಸುಮಾರು 5 ಲಕ್ಷ ರೂ. ದೊರೆತಿದೆ ಎಂದು ಹೇಳಲಾಗಿದೆ. ಅದರೆ ಧಾರವಾಹಿ ನಟಿ ಕಾವ್ಯಾಗೆ ಒಂದು ವಾರಕ್ಕೆ 5 ಲಕ್ಷ ರೂ. ನೀಡಲಾಗಿದ್ದು, ಕಾವ್ಯಾಗೆ ಹೋಲಿಸಿದರೆ ಅನುಪಮಾಗೆ ಕಡಿಮೆ ಸಂಭಾವನೆ ನೀಡಲಾಗಿದೆಯೇ ಎಂಬ ಅನುಮಾನ ಕಾಡತೊಡಗಿದೆ.
ಅನುಪಮಾ ಗೌಡಗೆ ದೊರೆತ ಸಂಭಾವನೆ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಬಿಗ್ ಬಾಸ್ ಮೂಲಗಳ ಪ್ರಕಾರ ಇನ್ನೂ ಹೆಚ್ಚಿನ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿದೆ.