ಮಂಗಳೂರು ಅಪರಾಧ ನಿಯಂತ್ರಣ ದಳ (ಸಿಸಿಬಿ)ಯು ಕುಖ್ಯಾತ ರೌಡಿಶೀಟರ್ ದಾವೂದ್ (43)ನನ್ನು ತಲಪಾಡಿ-ದೇವಿಪುರದ ರಸ್ತೆಯ ಸಮೀಪ ಶುಕ್ರವಾರ ಬಂಧಿಸಿದೆ.
ಉಳ್ಳಾಲದ ಧರ್ಮನಗರದಲ್ಲಿ ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ರೌಡಿಶೀಟರ್ ದಾವೂದ್ ನನ್ನು ಖಚಿತ ಮಾಹಿತಿ ಮೇರೆಗೆ ಪಿಎಸ್ಐ ನರೇಂದ್ರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಕಾರ್ಯಾಚರಣೆ ವೇಳೆ ದಾವೂದ್ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಕಾರಣ, ಪಿಎಸ್ಐ ನರೇಂದ್ರ ಹಾಗೂ ಇತರ ಸಿಬ್ಬಂದಿಗೆ ಗಾಯಗಳಾಗಿವೆ.
ಮುಂದಿನ ಕಾನೂನು ಕ್ರಮಕ್ಕಾಗಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಿದ್ದಾರೆ.
ದಾವೂದ್ ಕೊಲೆಗಳು, ಹಲ್ಲೆ ಮತ್ತು ಸುಲಿಗೆ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಯಾಗಿದ್ದಾನೆ.