May 18, 2025
WhatsApp Image 2025-01-02 at 3.30.29 PM

ಉಡುಪಿ : ಸೂರ್ಯ, ಆಕಾಶ, ಭೂಮಿ, ಚಂದ್ರನಿಗೆ ಸಂಬಂಧಿಸಿದಂತೆ 2025ನೇ ಸಾಲಿನಲ್ಲಿ ಖಗೋಳದಲ್ಲಿ ಹಲವು ವಿಶೇಷತೆಗಳು, ಕೆಲವಾರು ವಿಸ್ಮಯಗಳು ಕಂಡುಬರಲಿವೆ ಎಂದು ಖ್ಯಾತ ಖಗೋಳ ವಿಜ್ಞಾನಿ ಹಾಗೂ ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಇವುಗಳಲ್ಲಿ ಅತೀ ಹೆಚ್ಚು ಸೌರ ಜ್ವಾಲೆಗಳು, ನಾಲ್ಕು ಗ್ರಹಣಗಳು, ಮೂರು ಅತಿಸುಂದರ ಸೂಪರ್ ಮೂನ್‌ಗಳನ್ನು ಭೂಮಿಯಿಂದ ನೋಡಬಹುದಾಗಿದೆ. ಅಲ್ಲದೇ ಸೌರಮಂಡಲದಲ್ಲಿ ಶನಿಗ್ರಹದ ಸುತ್ತ ಸುಂದರವಾಗಿ ಕಾಣಿಸುವ ಬಳೆಗಳು ಭೂಮಿಯಲ್ಲಿ ಈ ವರ್ಷ ಕಾಣಿಸುವುದೇ ಇಲ್ಲ ಎಂದು ಡಾ.ಭಟ್ ಹೇಳಿದ್ದಾರೆ. ಹನ್ನೊಂದು ವರ್ಷದಲ್ಲೊಮ್ಮೆನಡೆಯುವ ಅತೀ ಹೆಚ್ಚು ಸೌರಜ್ವಾಲೆಗಳನ್ನು ಸೂರ್ಯ ಹೊರ ಹಾಕುವಿಕೆ ಕಳೆದ ವರ್ಷ ಪ್ರಾರಂಭವಾದುದು ಈ ವರ್ಷದ ಪ್ರಾರಂಭದ ಕೆಲ ತಿಂಗಳಲ್ಲಿ ಅತಿಯಾಗಲಿದೆ.

ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿಸಲಿದ್ದು, ಇದರಿಂದ ಅತೀ ಹೆಚ್ಚು ಸೌರಕಲೆಗಳು ಉಂಟಾಗಲಿವೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುದಾದರೂ ಭಾರತಕ್ಕೆ ಒಂದೇ ಗ್ರಹಣ ಕಾಣಿಸಲಿದೆ. ಮಾರ್ಚ್ 13/14 ಚಂದ್ರ ಗ್ರಹಣ, ಮಾರ್ಚ್ 29ಕ್ಕೆ ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟಂಬರ್ 7/8 ಚಂದ್ರ ಗ್ರಹಣ ಹಾಗೂ ಸೆಪ್ಟೆಂಬರ್ 21ಕ್ಕೆ ಪಾರ್ಶ್ವ ಸೂರ್ಯ ಗ್ರಹಣ ಕಂಡು ಬರಲಿದೆ. ಇವುಗಳಲ್ಲಿ ಭಾರತಕ್ಕೆ ಸಪ್ಟಂಬರ್ 7ರ ಚಂದ್ರಗ್ರಹಣ ಒಂದೇ ಗೋಚರವಾಗಲಿದೆ.

ಭೂಮಿಯಿಂದ ಈ ವರ್ಷ ಮೂರು ಸೂಪರ್ ಮೂನ್‌ಗಳನ್ನು ಕಾಣಬಹುದಾಗಿದೆ. ಅಕ್ಟೋಬರ್ 7, ನವಂಬರ್ 5, ಡಿಸೆಂಬರ್ 4ರಂದು ಸೂಪರ್ ಮೂನ್‌ಗಳು ಕಂಡುಬಂದರೆ, ಮಾರ್ಚ್ 14, ಎಪ್ರಿಲ್ 13 ಹಾಗೂ ಮೇ 12ರಂದು ಮೈಕ್ರೋ ಮೂನ್ ಸಂಭವಿಸಲಿದೆ ಎಂದವರು ತಿಳಿಸಿದ್ದಾರೆ. – ಡಾ.ಎ.ಪಿ.ಭಟ್ ,ಖ್ಯಾತ ಖಗೋಳ ವಿಜ್ಞಾನಿ

About The Author

Leave a Reply

Your email address will not be published. Required fields are marked *

<p>You cannot copy content of this page.</p>