BIGG NEWS : ಕುಕ್ಕರ್ ಬಾಂಬರ್ ಶಾರಿಕ್ ಭಯನಕ ಹಿಸ್ಟರಿ ಬಹಿರಂಗ : ಉಡುಪಿಯ ಶ್ರೀಕೃಷ್ಣ ಮಠದ ಬಳಿಯೂ ಓಡಾಟ

ಡುಪಿ : ಮಂಗಳೂರಿನ ಕುಕ್ಕರ್ ಬಾಂಬರ್ ಶಾರೀಕ್‍ ನ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗಗೊಂಡಿದ್ದು, ಶಾರಿಕ್ ಮೈಸೂರು, ಮಂಗಳೂರು ಅಷ್ಟೇ ಅಲ್ಲದೇ ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಭೇಟಿ ನೀಡಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಶಂಕಿತ ಉಗ್ರ ಶಾರಿಕ್ ಉಡುಪಿಯ ಶ್ರೀಕೃಷ್ಣ ಮಠ, ರಥಬೀದಿಯಲ್ಲಿ, ನಗರದ ಬಸ್ ನಿಲ್ದಾಣದಲ್ಲೆಲ್ಲಾ ಓಡಾಡಿದ್ದ, 2022ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮಠ ಹಾಗೂ ಉಡುಪಿಯ ರಥಬೀದಿಯಲ್ಲಿ ಸುತ್ತಾಡಿರೋ ಬಗ್ಗೆ ಬಗ್ಗೆ ಮಾಹಿತಿ ಸಿಕ್ಕಿದೆ.

ಸದ್ಯ ಮಂಗಳೂರು ಪೋಲಿಸರ ತಂಡ ಉಡುಪಿ ಶ್ರೀ ಕೃಷ್ಣ ಮಠ, ರಥಬೀದಿ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ. ಉಡುಪಿ ರಥಬೀದಿಯಲ್ಲಿ ಶಾರೀಕ್ ಸುತ್ತಾಡುತ್ತಿದ್ದ ವೇಳೆ ಇಲ್ಲಿಂದಲೇ ಕೆಲವರಿಗೆ ಫೋನ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Check Also

ಡಾ. ಸುಧಾ ಕಾಮತ್ ರವರಿಗೆ ಬಿ.ಸಿ ರಾಯ್ ಪುರಸ್ಕಾರ

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯ ಕಾಮತ್ ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ …

Leave a Reply

Your email address will not be published. Required fields are marked *

You cannot copy content of this page.