ಸಿಟಿ ಬಸ್ ನಿಲ್ದಾಣದಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ತರಕಾರಿ ಹಣ್ಣು ಹಂಪಲು ಹಾಗೂ ಇನ್ನಿತರ ವಸ್ತುಗಳನ್ನು ಹರಡಿಕೊಂಡು ಸಾರ್ವಜನಿಕರಿಗೆ ಸುಗಮವಾಗಿ ನಡೆದಾಡಲು ಅನಾನುಕೂಲವಾಗುವಂತೆ ಪುಟ್ಪಾತ್ ಅನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ ಇವರೆಲ್ಲರೂ ಸ್ಥಳೀಯರಾಗಿರದೆ, ಹಾವೇರಿ ಬಿಜಾಪುರ ಮೂಲದವರಾಗಿದ್ದಾರೆ.
ಸದಾ ಗಲಾಟೆ ಹೊಡೆದಾಡಿಕೊಳ್ಳುವುದು ಇಲ್ಲಿ ಮಾಮೂಲಿಯಾಗಿದೆ ಈ ಬಗ್ಗೆ ಸ್ಥಳೀಯರು ನಗರಸಭೆಯ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಲಿಲ್ಲ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಫುಟ್ಪಾತ್ ಮೇಲೆ ವ್ಯಾಪಾರ ಮಾಡುವ ಇವರನ್ನು ಕೂಡಲೆ ಖಾಯಂ ಆಗಿ ತೆರವುಗೊಳಿಸಿ ಜನರಿಗೆ ಸುಗಮವಾಗಿ ನಡೆದಾಡಲು ಅವಕಾಶ ಕಲ್ಪಿಸ ಕೊಡಬೇಕಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕೊಡಲೇ ಎಚ್ಚೆತ್ತು ಸೊಕ್ತ ಕ್ರಮ ಕೈಗೊಳ್ಳಲು ಬೇಕೆಂದು ನಾಗಕರಿರ ಅಭಿಪ್ರಾಯ.