ಮಂಗಳೂರು – ಇಸ್ಲಾಂ ಗೆ ಮತಾಂತರಿಸಿ ಲೈಂಗಿಕ ಕಿರುಕುಳ ವೈದ್ಯೆ ಸೇರಿದಂತೆ ಮೂವರ ವಿರುದ್ದ ದೂರು

ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರಿನ ಪ್ರಸಿದ್ಧ ವೈದ್ಯೆ ಮತ್ತು ಮುಸ್ಲಿಂ ಯುವಕರ ವಿರುದ್ಧ ದೂರು ದಾಖಲಾಗಿದೆ.

ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಿಸಲಾಗಿತ್ತು. ಮತಾಂತರದ ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಸಹ ಕೇಳಿ ಬಂದಿವೆ. ದೂರಿನಲ್ಲಿ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ ಖಲೀಲ್‌ ಎಂಬಾತ ಪರಿಚಯವಾಗಿದ್ದು, ನಾನು ಆತನ ಮೊಬೈಲ್‌ ಶಾಪ್‌ನಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುತ್ತಿದ್ದೆ.

2021ರ ಜನವರಿ 14ರಂದು ಖಲೀಲ್‌ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್‌ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ. ಅನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹಿಂದೂ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಬುರ್ಖಾ ಧರಿಸುವಂತೆ ಒತ್ತಾಯಿಸಿ ಬುರ್ಖಾ ತಂದು ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ದೂರಿನ ಹಿನ್ನೆಲೆ ವೈದ್ಯೆ ಹಾಗೂ ಖಲೀಲ್ ಮತ್ತು ಇಮಾಮ್ ವಿರುದ್ಧ ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.

Check Also

ವಿಟ್ಲ: ಅಡಿಕೆಮರ ಮುರಿದು ಬಿದ್ದು ಮಹಿಳೆ ಮೃತ್ಯು

ವಿಟ್ಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಮುರಿದು ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮೃತ …

Leave a Reply

Your email address will not be published. Required fields are marked *

You cannot copy content of this page.