

ಕಾಪು: ಆಸ್ಟ್ರೇಲಿಯಾದ ವಿಕ್ಟೋರಿಯನ್ ಸಂಸದ ಜಾನ್ ಮುಲ್ಲಾಹೆ ಉಡುಪಿ ಪ್ರವಾಸದಲ್ಲಿದ್ದಾರೆ.ನಿನ್ನೆ ಇಡೀ ದಿನ ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಇಂದು ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ನವದುರ್ಗಾ ಲೇಖನ ಯಜ್ಞದ ಲೇಖನ ಪುಸ್ತಕ ಪಡೆದರು. ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರು, ಉಡುಪಿಯ ನಿಕಟಪೂರ್ವ ಶಾಸಕರು ಕೆ.ರಘುಪತಿ ಭಟ್ ಅವರು ನವದುರ್ಗಾ ಲೇಖನ ಯಜ್ಞದ ಕುರಿತು ತಿಳಿಸಿದರು.