November 18, 2025
DeWatermark.ai_1760425096636

ಉಡುಪಿ: ತಮ್ಮ ಕೆಲಸದ ಸ್ಥಳದಲ್ಲಿ ವಿದ್ಯುತ್ ಆಘಾತದಿಂದ ಕಾರ್ಖಾನೆಯ ಮಾಲೀಕರೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿಯ ಬೈಲೂರಿನಲ್ಲಿ ಅಕ್ಟೋಬರ್ 13 ರ ಸಂಜೆ ನಡೆದಿದೆ,

ಮೃತಪಟ್ಟ ಮಾಲಿಕನನ್ನು ಸುನಿತಾ ಹೊಲೋ ಬ್ಲಾಕ್ ಫ್ಯಾಕ್ಟರಿಯ ಮಾಲೀಕ ಸುನಿಲ್ ಸೋನ್ಸ್ (45) ಎಂದು ಗುರುತಿಸಲಾಗಿದೆ.

ಕಳೆದ 22 ವರ್ಷಗಳಿಂದ ಘಟಕವನ್ನು ನಿರ್ವಹಿಸುತ್ತಿದ್ದ ಸುನಿಲ್, ತಮ್ಮ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಘಟನೆಯನ್ನು ಕಂಡ ಸ್ಥಳೀಯ ನಿವಾಸಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತರು ಪತ್ನಿ, ಮಗ ಮತ್ತು ಇತರ ಸಂಬಂಧಿಕರನ್ನು ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.