May 10, 2026
WhatsApp Image 2026-05-10 at 10.53.50 AM

 ಪ್ರಿಯಕರನೊಂದಿಗೆ ಜೀವನ ನಡೆಸಲು ಸ್ವಂತ ಪತಿಯ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೂಡಲಗಿ ತಾಲೂಕಿನ ಮೂಲದ ಹಸೀನಾ ನದಾಫ್ ಎಂಬಾಕೆಗೆ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟಿ ಗ್ರಾಮದ ಶರೀಫ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಯ ನಂತರವೂ ಈಕೆ ತನ್ನ ಪ್ರಿಯಕರ ಹಣಮಂತ ಮಾರಾಪೂರ ಜೊತೆ ಸಂಪರ್ಕದಲ್ಲಿದ್ದಳು. ಪ್ರಿಯಕರನ ಜೊತೆ ಓಡಿಹೋಗಲು ಸಂಚು ರೂಪಿಸಿದ ಈಕೆ, ತನ್ನ ಪತಿಯ ಮನೆಯಲ್ಲಿದ್ದ ಸುಮಾರು 21 ಲಕ್ಷ ರೂ. ಮೌಲ್ಯದ 154.6 ಗ್ರಾಂ ಚಿನ್ನಾಭರಣಳನ್ನು ದೋಚಿದ್ದಾಳೆ.ಬಂಧಿತರಿಂದ 11 ಸಾವಿರ ರೂ. ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯಲ್ಲಿ ಕಳ್ಳತನವಾದ ಬಗ್ಗೆ ದಿಲ್ಶಾನ್ ನದಾಫ್ ಎಂಬುವವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಕೈಗೊಂಡು, ಕೇವಲ 48 ಗಂಟೆಗಳ ಒಳಗೆ ಆರೋಪಿಗಳಾದ ಹಸೀನಾ ಮತ್ತು ಹಣಮಂತ ಮಾರಪುರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಮತ್ತು ಪಿಎಸ್ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರ

About The Author

Leave a Reply

Your email address will not be published. Required fields are marked *

You cannot copy content of this page.