

ಮಣಿಪಾಲ: ಈಶ್ವರ ನಗರ ನೀರಿನ ಟ್ಯಾಂಕ್ ಬಳಿ ಕಾರು ಅಪಘಾತವಾದ ಘಟನೆ ಮಾ.8ರ ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಸಂಭವಿಸಿದೆ.ಕಾರು ಹೆದ್ದಾರಿಯಿಂದ ಜಿಗಿದು ಪಲ್ಟಿ ಹೊಡೆದಿದ್ದು ಘಟನೆಯಲ್ಲಿ ಒರ್ವನಿಗೆ ಗಾಯವಾಗಿದೆ.
ಕಾರಿನಲ್ಲಿ ಹಲವು ನಂಬರ್ ಪ್ಲೇಟ್ ಗಳಿದ್ದು ಪಘಾತವಾದ ತತ್ ಕ್ಷಣ ಕಾರಿನೊಳಗಿದ್ದ ವ್ಯಕ್ತಿಗಳು ವಿವಿಧ ನೊಂದಣಿ ಸಂಖ್ಯೆಗಳುಳ್ಳ ನಂಬರ್ ಪ್ಲೇಟ್ ಗಳನ್ನು ಪೊದೆಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಅಲ್ಲಿ ಸೇರಿದ ಸಾರ್ವಜನಿಕರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.