

ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಗದಗೆದರಿದೆ. ಕಾಂಗ್ರೆಸ್ ಸದ್ಯ 111ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮ್ಯಾಜಿಕ್ ನಂಬರ್‌ಗೆ ಇನ್ನೆರಡು ಸ್ಥಾನ ಬೇಕಿದೆ. ಈ ಸಂಬಂಧ ತಮ್ಮ ಶಾಸಕರನ್ನು ಕಾಯ್ದಿಟ್ಟುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ. ಯಾರೊಬ್ಬರು ಎದುರು ಪಕ್ಷದ ಆಮಿಷಕ್ಕೆ ಒಳಗಾಗದಂತೆ ಕಾಂಗ್ರೆಸ್ ಶಾಸಕರನ್ನು ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುರೆದಿದ್ದು, ಕಾಂಗ್ರೆಸ್‌ಗೆ ಮತದಾನ ಪ್ರಭುಗಳು ಜೈ ಎಂದಿದ್ದಾರೆ.


ಮಂಗಳೂರಿನಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಗಮನ ಸೆಳೆದ ಯು.ಟಿ.ಖಾದರ್
ಮಂಗಳೂರು, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲಾ ಆರಂಭವಾಗಿದ್ದು, ಎಲ್ಲಾ ಪಕ್ಷಗಳ ನಾಯಕರ ಚಿತ್ತ ಮತ ಎಣಿಕೆಯ ಕಡೆ ನೆಟ್ಟಿದೆ. ಆದರೆ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಯು.ಟಿ.ಖಾದರ್ ಮಾತ್ರ ಯಾವುದೇ ಚಿಂತೆ ಇಲ್ಲದೆ ಮಕ್ಕಳ ಜೊತೆ ಕ್ರಿಕೆಟ್ ಆಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.


ಯು.ಟಿ.ಖಾದರ್ ಮಂಗಳೂರು ಕ್ಷೇತ್ರದಿಂದ ಸತತ ಗೆಲುವು ಕಂಡಿದ್ದು, ಈ ಬಾರಿಯೂ ಬಹುಮತದ ಗೆಲುವಿನ ಭರವಸೆಯಲಿದ್ದಾರೆ. ಆದ್ದರಿಂದ ಅವರು ಇಂದು ಬೆಳ್ಳಂಬೆಳಗ್ಗೆ ಯುಟಿ ಖಾದರ್ ಅವರು ಉಲ್ಲಾಳದ ಭಾರತ್ ಗ್ರೌಂಡ್‌ನಲ್ಲಿ ರಿಲ್ಯಾಕ್ಸ್ ಆಗಿ ಮಕ್ಕಳ ಜೊತೆ ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಯಾವ ಪಕ್ಷ ಈ ಬಾರಿ ಅಧಿಕಾರ ಗಿಟ್ಟಿಸಿಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. ಈ ನಡುವೆ ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಬಹುಮತದ ನಿರೀಕ್ಷೆಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.