ಮಂಗಳೂರು:ಸ್ಟ್ರಾಂಗ್ ರೂಂನ ಕೀ ಕಳೆದುಕೊಂಡ ಅಧಿಕಾರಿಗಳು!

ಮಂಗಳೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಮಂಗಳೂರಿನ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಂನ ಕೀಯನ್ನು ಅಧಿಕಾರಿಗಳು ಕಳೆದುಕೊಂಡಿರುವ ಪ್ರಸಂಗ ನಡೆದಿದೆ.

ಮತಎಣಿಕೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂನತ್ತ ಬಂದ ಅಧಿಕಾರಿಗಳಿಗೆ ಶಾಕ್‌ ಆಗಿದ್ದು, ಸ್ಟ್ರಾಂಗ್ ರೂಂವೊಂದರ ಕೀ ಕಳೆದು ಹೋಗಿರುವುದು ತಿಳಿದು ಬಂದಿದೆ. ಕೂಡಲೇ ಅಧಿಕಾರಿಗಳು ಕೀ ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಂಗಳು ಸದ್ಯ ಓಪನ್‌ ಆಗಿದ್ದು, ಮತಪೆಟ್ಟಿಗೆಗಳನ್ನು ಎಣಿಕಾ ಟೇಬಲ್‌ಗೆ ರವಾನಿಸಲಾಗಿದೆ.

ಮಂಗಳೂರು ಮತದಾನದ ವಿವರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೇಕಡ 75.87 ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 17,81,389 ಮತದಾರರು ತಮ್ಮ ಹಕ್ಕುಇ ಚಲಾಯಿಸಿದ್ದಾರೆ. ಮಂಗಳೂರು ಉತ್ತರದಲ್ಲಿ 249421ಮತದಾರರು ಮತ ಚಲಾಯಿಸಿದ್ದು, 71.6 ಶೇಕಡಾ ಮತದಾನವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 212753 ಮತದಾರರು ಮತ ಚಲಾಯಿಸಿದ್ದು, 79.91 ಶೇಕಡಾ ಮತದಾನವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 206029 ಮತದಾರರು ಮತ ಚಲಾಯಿಸಿದ್ದು, 78.53 ಶೇಕಡಾ ಮತದಾನವಾಗಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 205129 ಮತದಾರರು ಮತ ಚಲಾಯಿಸಿದ್ದು, 77.38 ಶೇಕಡಾ ಮತದಾನವಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 228377 ಮತದಾರರು ಮತ ಚಲಾಯಿಸಿ್ದ್ದು, ಶೇಕಡಾ 80.27 ಶೇಕಡಾ ಮತದಾನವಾಗಿದೆ. ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 205065 ಮತದಾರರು ಮತ ಚಲಾಯಿಸಿದ್ದು76 ಶೇಕಡಾ ಮತದಾನವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 245744 ಮತದಾರರು ಮತ ಚಲಾಯಿಸಿದ್ದು, 64.89 ಶೇಕಡಾ ಮತದಾನವಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 228871 ಮತದಾರರು ಮತ ಚಲಾಯಿಸಿದ್ದು ಶೇಕಡ 80.33 ಮತದಾನವಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎರಡು ಕ್ಷೇತ್ರಗಳಾದ ಮಂಗಳೂರು ಉತ್ತರದಲ್ಲಿ ಶೇಕಡ 71.6 , ಮಂಗಳೂರು ದಕ್ಷಿಣದಲ್ಲಿ 64.89 ಶೇಕಡಾ ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದಲ್ಲಿರುವ ಈ ಎರಡು ಕ್ಷೇತ್ರಗಳು ಕಡಿಮೆ ಮತದಾನವಾದ ಕ್ಷೇತ್ರಗಳಾದರೆ, ಗ್ರಾಮಾಂತರ ಭಾಗದಲ್ಲಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 80.33 ಮತದಾನವಾಗಿದೆ.

– oneindia

Check Also

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ …

Leave a Reply

Your email address will not be published. Required fields are marked *

You cannot copy content of this page.