ಮಂಗಳೂರು: ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ಇದೀಗ ನಟ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಸೀಸನ್ 9ರಲ್ಲಿ ಫೈನಲ್ ಪ್ರವೆಶಿಸಿದ್ದಾರೆ. ಆದರೆ ಇದೀಗ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಬಿಗ್‌ಬಾಸ್ ಟ್ರೋಫಿ ಈ ಬಾರಿ ಕೂಡಾ ಕರಾವಳಿಗೆ ಸಿಗುವ ಚಾನ್ಸಸ್ ಇದೆಯಂತೆ. ಕರಾವಳಿಯ ಮನೆ ಮಗ ರೂಪೇಶ್ ಶೆಟ್ಟಿ ಬಹುತೇಕ ಬಿಗ್‌ಬಾಸ್ ವಿನ್ನರ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಬಿಗ್‌ಬಾಸ್ ಒಟಿಟಿ ಸೀಸನ್‌ನಲ್ಲಿ ಅತೀ ಹೆಚ್ಚು ವೋಟ್ ಪಡೆದ ರೂಪೇಶ್ ಶೆಟ್ಟಿ ತನ್ನ ಟಾಸ್ಕ್, ಮನರಂಜನೆ ಹಾಡಿನ ಮುಖಾಂತರ ಕನ್ನಡಿಗರ ಮನ ಗೆದ್ದಿದ್ದಾರೆ.
ಅಷ್ಟೇ ಅಲ್ಲದೆ ಫೈನಲ್ ಪ್ರವೇಶಿಸುವ 5 ಸ್ಪರ್ಧಿಗಳಲ್ಲಿ ಕೂಡಾ ಒಬ್ಬರಾಗಿದ್ದಾರೆ. ಫಿನಾಲೆ ವಾರದಲ್ಲಿ ಕೂಡಾ ಬಿಗ್‌ಬಾಸ್ ರೂಪೇಶ್ ಶೆಟ್ಟಿಯ ಆಸೆಗಳನ್ನು ಈಡೇರಿಸಿದ್ದಾರೆ. ಕೇವಲ ಜನರ ಮನಸ್ಸನ್ನು ಮಾತ್ರವಲ್ಲದೆ ಆ ಮನೆಯೊಳಗೆ ಕೂಡಾ ಇವರು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಬೆಳೆಸಿಕೊಂಡಿದ್ದಾರೆ. ಇಂದು ಮತ್ತು ನಾಳೆ ನಡೆಯುವ ಬಿಗ್‌ಬಾಸ್ ಫೈನಲ್ ಶೋನಲ್ಲಿ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲ ಜನರದ್ದು.
ಅದರಲ್ಲೂ ದೊರೆತ ಮಾಹಿತಿಯಂತೆ ಇದೀಗ ಫೈನಲ್ ಪ್ರವೇಶಿಸಿರುವ 5 ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಎಲಿಮೆನೇಟ್ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.