ಕೊಚ್ಚಿ: ಹೊಸ ವರ್ಷ ಪ್ರಯುಕ್ತ ಸುಡಲು ನಿರ್ಮಿಸಲಾಗಿರುವ ಪ್ರತಿಕೃತಿ (ಕಾರ್ನೀವಲ್) ಪ್ರಧಾನಿ ಮೋದಿಯವರನ್ನು ಹೋಲುತ್ತಿದೆ ಎಂದು ಕೇರಳದ ಎರ್ನಾಕುಲಂ ಬಿಜೆಪಿ ಜಿಲ್ಲಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎಸ್. ಶೈಜು ಈ ಬಗ್ಗೆ ಪ್ರತಿಕ್ರಿಯಿಸಿ, ಕೊಚ್ಚಿನ್ ಕಾರ್ನೀವಲ್ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ. ದೇಶದ ಪ್ರಧಾನಿಯನ್ನು ಅವಮಾನಿಸುವ ಪ್ರಯತ್ನ ಇದಾಗಿದೆ. ಕೊಚ್ಚಿನ್ ಕಾರ್ನಿವಲ್ಗೆ ಅಡ್ಡಿಪಡಿಸಲು ಇದನ್ನು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಪ್ರತಿಭಟನೆಯ ನಂತರ ಪ್ರತಿಕೃತಿ ರೂಪ ಬದಲಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಡಿಸೆಂಬರ್ 31 ರ ಮಧ್ಯರಾತ್ರಿ ಸುಟ್ಟು ಹಾಕುವ ಪ್ರತಿಕೃತಿಗೆ ಸೂಟು ಗಡ್ಡ ಬಿಟ್ಟ ಮುದುಕನ ಮಾದರಿ ರಚಿಸಲಾಗಿದೆ. ಇದು ಪ್ರಧಾನಿ ಮೋದಿಯನ್ನು ಹೋಲುತ್ತಿದೆ ಅನ್ನೋ ಆರೋಪ ಕೇಳಿ ಬಂದಿದ್ದು, ಬಿಜೆಪಿ ದೂರು ದಾಖಲಿಸಿತ್ತು.