ಇಂದಿನ ಕಾಲದಲ್ಲಿ, ‘Google’ ಪ್ರತಿಯೊಂದು ದೊಡ್ಡ ಪ್ರಶ್ನೆಗೆ ಉತ್ತರವಾಗಿದೆ. ಯಾವುದೇ ಪ್ರಶ್ನೆ ಇರಲಿ, ನೀವು Google ನಲ್ಲಿ ಅದಕ್ಕೆ ಕೆಲವು ಉತ್ತರಗಳನ್ನು ಪಡೆಯುತ್ತೀರಿ. ಜನರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು Google ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
Googleನಲ್ಲಿ ನೀವು ಸರ್ಚ್ ಮಾಡಿದ ಹಿಸ್ಟರಿ ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಅದನ್ನು ಡಿಲೀಟ್ ಮಾಡಬಹುದು. ಆದ್ರೆ, ಇದರ ನಂತರವೂ ಸರ್ಚ್ ಹಿಸ್ಟರಿ ಹಾಗೆಯೇ ಉಳಿದಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?. ಇದರಿಂದಾಗಿ ಯಾವ ಲಿಂಗ ಅಥವಾ ವಯಸ್ಸಿನ ಜನರು ಏನು ಸರ್ಚ್ ಮಾಡ್ತಾರೆ ಅನ್ನೋದನ್ನ Google ಡೇಟಾ ಬಹಿರಂಗಪಡಿಸಿದೆ.
ಹೌದು, ಮದುವೆಯಾಗಿರುವ ಅಥವಾ ಮದುವೆಯಾಗಲಿರುವ ಮಹಿಳೆಯರು ಖಂಡಿತವಾಗಿಯೂ ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಹುಡುಕುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅದೇನೆಂಬುದನ್ನು ನೋಡೋಣ ಬನ್ನಿ…
ವಿವಾಹಿತ ಮಹಿಳೆಯರು Googleನಲ್ಲಿ ಏನನ್ನು ಸರ್ಚ್ ಮಾಡ್ತಾರೆ?
ವಿವಾಹಿತ ಮಹಿಳೆಯರು ಅಥವಾ ಮದುವೆಯಾಗಲಿರುವವರು ತಮ್ಮ ಪತಿಗೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಲು ಬಯಸುತ್ತಾರೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಈ ಮಹಿಳೆಯರು ಕೇಳುವ ಪ್ರಶ್ನೆಗಳಲ್ಲಿ ಪತಿಯ ಇಷ್ಟಗಳು ಮತ್ತು ಇಷ್ಟವಿಲ್ಲದಿರುವಿಕೆಗಳು, ಹೃದಯಗಳನ್ನು ಗೆಲ್ಲುವ ಮಾರ್ಗಗಳು, ಸಂತೋಷಪಡಿಸುವ ಮಾರ್ಗಗಳು ಇತ್ಯಾದಿ ಸೇರಿವೆ. ಇಷ್ಟೇ ಅಲ್ಲ, ವರದಿಯ ಪ್ರಕಾರ, ಕೆಲವು ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಗುಲಾಮನನ್ನಾಗಿ ಮಾಡಿಕೊಳ್ಳುವ ಮಾರ್ಗವನ್ನು ಹುಡುಕುತ್ತಾರೆ.
ಈ ರೀತಿ ಕೇಳಲಾದ ಪ್ರಶ್ನೆಗಳೆಂದರೆ, ಗಂಡನನ್ನು ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?. ಗಂಡನನ್ನು ಮುಷ್ಟಿಯಲ್ಲಿಟ್ಟುಕೊಳ್ಳುವುದು ಹೇಗೆ?. ಪತಿಗೆ ಯಾವುದು ಹೆಚ್ಚು ಇಷ್ಟ, ಮಗುವಾಗಲು ಯಾವ ಸಮಯ ಸರಿಯಾಗಬಹುದು, ಮಗು ಯಾವಾಗ ಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕು. ಕುಟುಂಬ, ಇತ್ಯಾದಿ ಪ್ರಶ್ನೆಗಳನ್ನು ಒಳಗೊಂಡಿರಬಹುದು.
ಮದುವೆಗೂ ಮುನ್ನ ಹುಡುಗಿಯರು Googleನಲ್ಲಿ ಏನನ್ನು ಸರ್ಚ್ ಮಾಡ್ತಾರೆ?
ವಿವಾಹಿತ ಮಹಿಳೆಯರು ಮಾತ್ರವಲ್ಲದೆ ಮದುವೆಯಾಗಲಿರುವವರೂ ಗೂಗಲ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಮದುವೆಗೆ ಮೊದಲು, ಮಹಿಳೆಯರು ಹೊಸ ಕುಟುಂಬದಲ್ಲಿ ಅಂದರೆ, ಅತ್ತೆಯೊಂದಿಗೆ ಹೇಗೆ ವರ್ತಿಸಬೇಕು, ಮದುವೆಯ ನಂತರ ಮಹಿಳೆಯರು ಹೊಸ ಕುಟುಂಬದಲ್ಲಿ ಒಂದು ಭಾಗವಾಗುವುದು ಹೇಗೆ ಎಂದು ತಿಳಿಯಲು ಬಯಸುತ್ತಾರೆ. ಇದಲ್ಲದೇ ಅತ್ತೆಯ ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಹುದು, ಮದುವೆಯ ನಂತರ ಯಾವ ವ್ಯಾಪಾರ ಅಥವಾ ಕೆಲಸ ಮಾಡಬಹುದು ಎಂಬುದನ್ನೂ ಮಹಿಳೆಯರು ತಿಳಿದುಕೊಳ್ಳಲು ಬಯಸುತ್ತಾರೆ. ವಿವಾಹಿತ ಮಹಿಳೆಯರು ತಿಳಿದುಕೊಳ್ಳಲು ಬಯಸುವ Google ಹುಡುಕಾಟ ಪಟ್ಟಿಯಲ್ಲಿ ಇಂತಹ ಪ್ರಶ್ನೆಗಳನ್ನು ಸೇರಿಸಲಾಗಿದೆ.