ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಮೃತಪಟ್ಟ ವೃದ್ಧನ ಶವವನ್ನು ಎಸೆದ ಆರೋಪದ ಮೇಳೇ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ.
67 ವರ್ಷದ ವ್ಯಕ್ತಿಯನ್ನು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪತ್ತೆಯಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿತ್ತು, ತನಿಖೆ ವೇಳೇಯಲ್ಲಿ 67 ವರ್ಷದ ಉದ್ಯಮಿಯು ತನ್ನ 35 ವರ್ಷದ ಮನೆಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ್ದ ವ್ಯಕ್ತಿ ನವೆಂಬರ್ 16 ರಂದು ತನ್ನ ಗೆಳತಿಯ ಮನೆಗೆ ಭೇಟಿ ನೀಡಿದ್ದ ಆ ವೇಳೇಯಲ್ಲಿ ಅವಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಅವಳ ಹಾಸಿಗೆಯ ಮೇಲೆಯೇ ಸಾವನ್ನಪ್ಪಿದನು ಎನ್ನಲಾಗಿದೆ. ಈ ವೇಳೆ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ವ್ಯಕ್ತಿಯ ಗುರುತನ್ನು ತಿಳಿದ ನಂತರ, ಪೊಲೀಸರು ಅವನ ಫೋನ್ ಕರೆಗಳ ವಿವರಗಳನ್ನು ಪರಿಶೀಲಿಸಿದರು ಮತ್ತು ಸಾವನ್ನಪ್ಪಿರುವ ವ್ಯಕ್ತಿ ತನ್ನ ಗೆಳತಿಯ ಮನೆಗೆ ಭೇಟಿ ನೀಡಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಘಟನೆಯ ತನಿಖೆ ನಡೆಯುತ್ತಿರುವುದರಿಂದ, ಆರೋಪಿ ಮತ್ತು ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.