

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದದಲ್ಲಿಯೇ ಸಿಲುಕುತ್ತಿರುವ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅರೆಸ್ಟ್ ಆಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ನಟಿ ರಚಿತಾ ರಾಮ್ ಅವರ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ವಿರುದ್ಧ ಮಾತನಾಡುವ ಮೂಲಕ ಡಿ ಬಾಸ್ ಫ್ಯಾನ್ಸ್ ಸಿಟ್ಟಿಗೆ ಕಾರಣರಾಗಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ತೂಗುದೀಪ ಬಂಧನಕ್ಕೊಳಗಾಗಿದ್ದರು. ಆಗಿನಿಂದ ದರ್ಶನ್ ವಿರುದ್ಧ ಹೇಳಿಕೆ ನೀಡುತ್ತಲೇ ಜಗದೀಶ್ ಬರುತ್ತಿದ್ದರು. ಬಿಗ್ ಬಾಸ್ ಸ್ಪರ್ಧಿಯಾಗಿ ಹೋದಾಗಲೂ ಕಂಟೆಸ್ಟ್ ಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಏರು ಧ್ವನಿಯಲ್ಲಿ ಕೈ ಕೈ ಮಿಲಾಯಿಸುವ ಹಂತದವರೆಗೆ ಹೋಗುತ್ತಿದ್ದರು. ಕೊನೆಗೆ ಗಲಾಟೆ ವಿಚಾರ ಸಂಬಂಧ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.
ಮತ್ತೆ ದರ್ಶನ್ ತೂಗುದೀಪ ವಿರುದ್ಧ ವಿಡಿಯೋ ಹರಿಬಿಡುತ್ತಿದ್ದ ಲಾಯರ್ ಜಗದೀಶ್ ವರ್ತನೆ ಡಿ ಬಾಸ್ ಅಭಿಮಾನಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಆಕ್ರೋಶಕ್ಕೂ ಕಾರಣವಾಗಿತ್ತು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಲಾಯರ್ ಜಗದೀಶ್ ಹಾಗೂ ದರ್ಶನ್ ತೂಗುದೀಪ ಫ್ಯಾನ್ಸ್ ನಡುವೆ ಕೈ ಕೈ ಮಿಲಾಯಿಸಿ ಬಟ್ಟೆ ಹರಿದುಕೊಂಡು ಗಲಾಟೆ ಮಾಡಿಕೊಂಡಿದ್ದರು.
ಕನ್ನಡ ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹಾಗೂ ಯುವಕರ ಗಲಾಟೆ ಪ್ರಕರಣದಲ್ಲಿ ಜಗದೀಶ್ ಅವರು ಬಂಧಿಸಲಾಗಿದೆ. ಕೋಡಿಗೆಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ವಕೀಲ ಜಗದೀಶ್ ಹಾಗೂ ಅವರ ಗನ್ ಮ್ಯಾನ್ ಕೂಡ ಬಂಧಿತರಾಗಿದ್ದಾರೆ. ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಜಗದೀಶ್ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆ ನಂತರ ಸಾಕಷ್ಟು ಗದ್ದಲ ಉಂಟಾಗಿತ್ತು.
ಬೆಂಗಳೂರಿನ ಕೊಡಿಗೆಹಳ್ಳಿಯ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಿ ರಸ್ತೆ ಬಂದ್ ಮಾಡಿದ್ದಕ್ಕೆ ಲಾಯರ್ ಜಗದೀಶ್ ಜನವರಿ 23ರಂದು ಗಲಾಟೆ ಮಾಡಿದ್ದರು. ಈ ವೇಳೆ ಕೆಲ ಯುವಕರಿಂದ ಲಾಯರ್ ಜಗದೀಶ್ ಗೆ ಚೆನ್ನಾಗಿ ಥಳಿಸಿದ್ದರು. ಜನವರಿ 24ರಂದು ಜಗದೀಶ್ ಗನ್ಮ್ಯಾನ್ ಕೊಡಿಗೆಹಳ್ಳಿಯಲ್ಲಿ ಹುಚ್ಚಾಟ ನಡೆಸಿದ್ದ. ನಡು ರಸ್ತೆಯಲ್ಲೇ ನಿಂತು ಫೈರಿಂಗ್ ಮಾಡಿದ್ದರು. ಗುಂಡಿನ ಸದ್ದು ಕೇಳಿ ಜನರು ಬೆಚ್ಚಿಬಿದ್ದಿದ್ದರು. ಬಳಿಕ ರೊಚ್ಚಿಗೆದ್ದಿದ್ದರು.