ತಮಿಳುನಾಡು; ಕುರ್ಚಿ ತರುವುದು ತಡವಾಯಿತೆಂದು ಸಿಟ್ಟಾದ ಡಿಎಂಕೆ ಪಕ್ಷದ ಸಚಿವ ಎಸ್ಎಂ ನಾಸರ್ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ.
ಸಚಿವರು ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆ ಹೋದಾಗ ಅತ್ಯಂತ ಸಭ್ಯತೆಯಿಂದ ವರ್ತಿಸುತ್ತಾರೆ.ಆದರೆ ಗೆದ್ದ ಬಳಿಕ ದುರ್ವರ್ತನೆ ತೋರಿಸುತ್ತಾರೆ ಎಂದು ನೆಟ್ಟಿಗರು ಮಿನಿಸ್ಟರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.