ರಿಯಾದ್ : ಭಾರತದಲ್ಲಿ ಹಿಜಬ್ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿರುವಂತೆ ಸೌದಿ ಅರೇಬಿಯಾ ತನ್ನ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾವನ್ನು (ಅಬಯಾ) ನಿಷೇಧಿಸಿದೆ.
ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬುರ್ಖಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ.
2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು ಇನ್ನು ಮುಂದೆ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಘೋಷಿಸಲಾಗಿತ್ತು. ಆದರೂ ಹೆಚ್ಚಿನ ಮಹಿಳೆಯರು ಅಬಯಾ ಧರಿಸುವುದನ್ನು ಮುಂದುವರೆಸಿದ್ದಾರೆ.