ಬೈಂದೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯ ಯಕ್ಷಗಾನ ಕಲಾವಿದರೊಬ್ಬರ ಮನೆಗೆ ನುಗ್ಗಿ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಶಿರೂರು ಮೇಲ್ಪೇಟೆ ಎಂಬಲ್ಲಿ ನಡೆದಿದೆ.
ಮೇಲ್ಪೇಟೆ ಕೊಠಡಿಯಲ್ಲಿ ವಾಸವಾಗಿರುವ ಯಕ್ಷಗಾನ ಕಲಾವಿದ ಸಂತೋಷ್ ಮೊಗವೀರ(34) ಎಂಬವರಿಗೆ ಗುರುರಾಜ್ ಎಂಬಾತನನ್ನು ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಪರಿಚಯವಾಗಿತ್ತು. ಗುರುರಾಜ್ ನ.9ರಂದು ಸಂತೋಷ್ ಅವರ ಕೊಠಡಿಗೆ ಬಂದು ಉಳಿದುಕೊಂಡಿದ್ದನು. ನ.12ರಂದು ಸಂತೋಷ್ ಹಾಗೂ ಗುರುರಾಜ್ ಹೆರಿಕುದ್ರು ಎಂಬಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದರು.
ಅಲ್ಲಿ ಗುರುರಾಜ್, ಸಂತೋಷ್‌ಗೆ ಹೇಳದೆಯೇ ಮೇಲ್ಪೆಟೆಗೆ ಬಂದು ಕೊಠಡಿಯ ಬೀಗವನ್ನು ಒಡೆದು ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನದ ಚೈನ್, ಚಿನ್ನದ ಉಂಗುರ, ಕಾಣಿಕೆ ಡಬ್ಬಿಯಲ್ಲಿದ್ದ 11,000ರೂ. ನಗದು, ಮೊಬೈಲ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ 85,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.