ಚಿತ್ರದುರ್ಗ : ಸಿಎಂ ಬೊಮ್ಮಾಯಿ ‘ಎಸ್ಕಾರ್ಟ್ ವಾಹನ’ ಪಲ್ಟಿಯಾಗಿ ಹಲವರಿಗೆ ಗಾಯಗಳಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದಿದೆ.
ಅಫಘಾತದಲ್ಲಿ ಸಿಇಎನ್ ಸಿಪಿಐ ರಮಾಕಾಂತ್ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ವಾಣಿವಿಲಾಸ ಡ್ಯಾಂನಿಂದ ಹಿರಿಯೂರುಗೆ ಬರುವ ವೇಳೆ ಸಿಎಂ ಬೊಮ್ಮಾಯಿಗೆ ಎಸ್ಕಾರ್ಟ್ ನೀಡಿದ ಪೊಲೀಸ್ ವಾಹನ ಪಲ್ಟಿಯಾಗಿದೆ.
ವಾಣಿವಿಲಾಸ ಡ್ಯಾಮ್ ನಿಂದ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೊಮ್ಮಾಯಿ ‘ಎಸ್ಕಾರ್ಟ್ ವಾಹನ’ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.