ಇಂದು ಜನರ ಅಭಿರುಚಿ ಬಹಳ ವಿಭಿನ್ನವಾಗಿದೆ. ಎಲ್ಲಾ ವಿಷಯದಲ್ಲೂ ಹೊಸತನ್ನು ಹುಡುಕುತ್ತಾರೆ ಜನರು. ಅದರಲ್ಲೂ ಸಾಮಾಜಿಕ ಜಾಲತಾಣಗಳ ಪರಿಣಾಮದಿಂದಾಗಿ ಜನರು ವಿಶೇಷ ಫೋಟೋ ಶೂಟ್ ವಿಡಿಯೋ ಮೊದಲಾದವುಗಳಿಗೆ ಹೆಚ್ಚು ಮಾರುಹೋಗಿದ್ದಾರೆ. ಹಾಗಾಗಿಯೇ ಇಂದು ಪ್ರತಿಯೊಬ್ಬರು ತಮ್ಮ ಜೀವನದ ವಿಶೇಷ ಗಳಿಗೆಗಳನ್ನ ಸೆರೆಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಮರೆಯಲಾಗದ ಹಾಗೂ ನೆನಪಿನಲ್ಲಿ ಇರುವಂತಹ ಅತ್ಯುತ್ತಮ ಘಳಿಗೆ ಅಂದ್ರೆ ಅದು ಮದುವೆ. ಹಾಗಾಗಿ ಮದುವೆಯ ಸಂದರ್ಭದಲ್ಲಿ ಅಥವಾ ಮದುವೆ ಗೊತ್ತಾದ ನಂತರದ ಪ್ರತಿಯೊಂದು ಕ್ಷಣವನ್ನು ಮೆಮೊರೇಬಲ್ ಆಗಿ ಇಡಲು ಜನ ಪ್ರಯತ್ನಿಸುತ್ತಾರೆ. ಇಂದು ಪ್ರಿ ವೆಡ್ಡಿಂಗ್ ಶೂಟ್ ಗಳು ಹೆಚ್ಚು ಫೇಮಸ್ ಆಗುತ್ತಿವೆ. ಇದೆ ಈಗಿನ ಟ್ರೆಂಡ್.
ಒಬ್ಬರು ಒಂದೊಂದು ರೀತಿಯ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ಮದುವೆಗೂ ಗಂಡ ಹೆಂಡತಿ ಆಗಲಿರುವ ಜೋಡಿ ವಿಭಿನ್ನವಾಗಿ ಫೋಟೋ ಶೂಟ್ ಗಳನ್ನ ವಿಡಿಯೋಗಳನ್ನು ಮಾಡಿಸುತ್ತಾರೆ. ಕೆಲವರಂತೂ ಇದಕ್ಕಾಗಿ ಅದೆಷ್ಟು ಹಣವನ್ನು ಖರ್ಚು ಮಾಡುತ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಬೇರೆ ಬೇರೆ ಕಾನ್ಸೆಪ್ಟ್ ಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಈ ಹಿಂದೆ ಕೇವಲ ಫೇಸ್ ಬುಕ್ ನಲ್ಲಿ ಮಾತ್ರ ಜನರು ಪೋಟೋಗಳನ್ನು ಶೇರ್ ಮಾಡುತ್ತಿದ್ದರು. ಇದೀಗ ಇನ್ಸ್ಟಾಗ್ರಾಮ್ ಬಂದಮೇಲಂತೂ ಜನ ಇನ್ನೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಅದರಲ್ಲಿಯೇ ಹೆಚ್ಚು ಹೆಚ್ಚು ಫೊಟೋಗಳನ್ನು ಶೇರ್ ಮಾಡುತ್ತಾರೆ. ಫ್ರೀ ವೆಡ್ಡಿಂಗ್ ಫೋಟೋಶೂಟ್ ಅಂತೆಯೇ ಬೇಬಿ ಬಂಪ್ ಫೋಟೋಶೂಟ್ ಗಳು ಕೂಡ ಟ್ರೆಂಡ್ ಆಗಿವೆ.
ಇತ್ತೀಚಿಗೆ ಸಿನಿಮಾ ತಾರೆಯರು ಮಾತ್ರವಲ್ಲ ಸಾಮಾನ್ಯರು ಕೂಡ ವಿವಿಧ ರೀತಿಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚಿಗೆ ದ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಬೇಬಿ ಬಂಪ್ ಫೋಟೋಶೂಟ್ ತುಂಬಾನೇ ವೈರಲ್ ಆಗಿತ್ತು. ಇನ್ನು ನವ ವಧುವರರು ವೆಡ್ಡಿಂಗ್ ಫೋಟೋಶೂಟ್ ಗಳಿಗಾಗಿ ಹೊಸ ಜಾಗವನ್ನು ಹುಡುಕಿ ಹೊರಡುತ್ತಾರೆ ಅಂತಹ ಸಂದರ್ಭದಲ್ಲಿ ಕೆಲವು ಸಾಹಸಕ್ಕೆ ಕೈ ಹಾಕಿ ಜೀವಕ್ಕೆ ಅಪಾಯ ತಂದುಕೊಂಡಿದ್ದು ಇದೆ.
ಈ ಹಿಂದೆ ವಿದೇಶಗಳಲ್ಲಿ ಮಾತ್ರ ಪ್ರೀವಿಡ್ಡಿಂಗ್ ಫೋಟೋಶೂಟ್ ಮಾಡಿ ಮಾಡಿಸುತ್ತಿದ್ದರು. ಆದರೆ ಇದೀಗ ಅವರನ್ನು ಕೂಡ ಮೀರಿಸುವ ಮಟ್ಟಕ್ಕೆ ದೇಶದಲ್ಲಿಯೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸಲಾಗುತ್ತದೆ. ಇತ್ತೀಚಿಗೆ ಕೇಸರಿನಲ್ಲಿ ನಮ್ಮ ಜೋಡಿಯ ಫ್ರೀ ವೆಡ್ಡಿಂಗ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದಕ್ಕಿಂತ ಒಂದು ಕಾನ್ಸೆಪ್ಟ್ ಗಳು ವಿಶೇಷವಾಗಿರುತ್ತವೆ. ಹೌದು ಇನ್ನೇನು ಮದುವೆಯಾಗಿ ಸಂಸಾರ ನಡೆಸಲು ಹೊರಟ ಜೋಡಿ ಮದುವೆಗೂ ಮೊದಲು ಫ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಇಂಥ ಫೋಟೋ ಶೂಟ್ ಈವರಿಗೆ ನೀವು ನೋಡಿರಲಿಕ್ಕಿಲ್ಲ. ಹೌದು, ನವ ಜೋಡಿ ಕೆಸರಿನಲ್ಲಿ ಮಿಂದೆದ್ದು ಫೋಟೋ ಶೂಟ್ ಮಾಡಿಸಿದ್ದಾರೆ. ಮೈಕೈಯೆಲ್ಲಾ ಕೆಸರನ್ನು ಮೆತ್ತಿಕೊಂಡು ವಿವಿಧ ಬಂಗಿಯಲ್ಲಿ ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದಾರೆ.
ಸದ್ಯ ಕೆಸರಿನಲ್ಲಿ ಫೋಟೋಶೂಟ್ ಮಾಡಿಸಿದ ಪ್ರೀ ವೆಡ್ಡಿಂಗ್ ಫೋಟೋಗಳು ಟ್ರೆಂಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಹಿಂದೆ ಕೇರಳದ ಜೋಡಿಯೊಂದು ಹಳ್ಳಿ ಸೊಗಡಿನ ಕಲ್ಪನೆಯಲ್ಲಿ ಮಾಡಿಸಿದ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕೆಸರಿನ ಪೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ.