October 16, 2024
WhatsApp Image 2022-12-20 at 6.45.18 PM

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐಆರ್‍ ದಾಖಲಾಗಿದೆ. ನಿನ್ನೆ ಬೆಳ್ಳಾರೆಯ ಉದ್ಯಮಿ, ದಿವ್ಯಪ್ರಭಾ ಅವರ ಅಳಿಯ ನವೀನ್ ಮಲ್ಲಾರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ವಂತ ಅತ್ತೆ, ಪತ್ನಿ ‌ಮತ್ತು ಇನ್ನಿತರ ಅಪರಿಚಿತರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದೆಲ್ಲದರ ಕಿಂಗ್ ಪಿನ್‌ ಮಾಧವ ಗೌಡ..! ಸ್ವಂತ ತಂದೆ – ಅತ್ತೆಯ ನಡುವೆ ಸಂಬಂಧ..??ಸ್ವಂತ ತಂದೆಯ ಚಪಲಕ್ಕೆ ನವೀನ್ ಬಲಿಪಶು ಆಗುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನವೀನ್ ಮಲ್ಲಾರ ತಂದೆ ಮಾಧವ ಗೌಡ ಮತ್ತು ದಿವ್ರಪ್ರಭಾ ಗೌಡ ಇವರಿಬ್ಬರ ನಡುವೆ ಸಲುಗೆ, ಒಡನಾಟ ಇದೆ ಎನ್ನಲಾಗುತ್ತಿದೆ. ಸ್ವಂತ ತಂದೆ ಮತ್ತು ಅತ್ತೆ ನಡುವೆ ಪ್ರೇಮ ಸಂಬಂಧ ಇದ್ದು ನವೀನ್ ಅವರಿಗೆ ತಲೆ ಎತ್ತಲೂ ಆಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಇನ್ನು ಮಡಿಕೇರಿಯಲ್ಲಿ ಆಂಬ್ಯುಲೆನ್ಸ್ ತಡೆವೊಡ್ಡಿದ್ದಾರೆ. ಆಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನವೀನ್ ಸ್ಪೋಟಕ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. ತಮ್ಮ ಮನೆಯಲ್ಲಿನ ಕೌಟುಂಬಿಕ ಕಲಹದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಹೆಂಡತಿಗೆ ಪೋಲಿ ಪೊಲೀಸಪ್ಪನ ಜೊತೆ ಸಂಬಂಧಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನವೀನ್ ಹೆಂಡತಿಯ ಅಸಲಿ ಮುಖವಾಡವನ್ನು ಬಿಚ್ಚಿಟ್ಟಿದ್ದಾರೆ. ಕೆಲ ತಿಂಗಳುಗಳ ಹಿಂದೆ ಬೆಳ್ಳಾರೆಯ ಲಾಡ್ಜ್‌ವೊಂದರಲ್ಲಿ ಹೆಂಡತಿ ಸ್ಪಂದನ, ಬೆಳ್ಳಾರೆ ಪೊಲೀಸ್ ಠಾಣೆಯ ಕ್ರೈಂ ಎಸ್.ಐ. ಆನಂದ ಇಬ್ಬರೂ ಲಾಡ್ಜ್‌ನಲ್ಲಿರುವ ಮಾಹಿತಿ ತಿಳಿದ ನವೀನ್ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸಪ್ಪನ ಜೊತೆಗೆ ಆಕೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾಗಿ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ.

ಪ್ರಕರಣದ ವಿವರ :ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆಯ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ನಿನ್ನೆ ಮಧ್ಯಾಹ್ನ 12:45 ರ‌ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶುರಾಮ ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿತ್ತು‌ ಎನ್ನಲಾಗಿದೆ.

ಕಳೆದ ಮೂರು ತಿಂಗಳಿನಿಂದ ನವೀನ್ ಹಾಗೂ ಸ್ಪಂದನ ನಡುವೆ ವೈಮನಸ್ಸು ಉಂಟಾಗಿದ್ದು, ಸ್ಪಂದನ ತವರುಮನೆಗೆ ಹೋಗಿದ್ದಳು. ಕಳೆದ 18 ರಂದು ಈ ಬಗ್ಗೆ ಮಾತುಕತೆಯಾಗಿದ್ದು, ನವೀನ್ ಅವರು ಸ್ಪಂದನ ನನಗೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹಾಗೂ ಮಗಳು ಸ್ಪಂದನಾ ಮತ್ತು ಇನ್ನಿತರ ‌ಆರೋಪಿಗಳು ನವೀನ್ ಅವರನ್ನು ಅಪಹರಿಸುವ ಉದ್ದೇಶದಿಂದ ಕೈಕಾಲು ಕಟ್ಟಿ ಅಂಬ್ಯುಲೆನ್ಸ್ ನಲ್ಲಿ ನವೀನ್ ಅವರನ್ನು ಹೊತ್ತುಕೊಂಡು ಹೋಗಿರುವುದಾಗಿ ನೀರಜಾಕ್ಷಿ ಅವರು‌ ದೂರು ನೀಡಿದ್ದಾರೆ.

ಅಲ್ಲದೇ ಘಟನೆಯ ವೇಳೆ ತಡೆಯಲು ಹೋದ ನೀರಜಾಕ್ಷಿ ಮತ್ತು ಅವರ ಸೊಸೆ ಪ್ರಜ್ಞಾ ಅವರನ್ನು ಕೈಯಿಂದ ಎಳೆದಾಡಿ ಹಲ್ಲೆ ನಡೆಸಿರುವುದರಿಂದ, ತುಳಿದು ಗಾಯಗೊಳಿಸಿರುವುದರಿಂದ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ನಿನ್ನೆಯೇ ಅಪಹರಣಕಾರರನ್ನು ಸುಂಟಿಕೊಪ್ಪ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನವೀನ್ ಅವರ ತಂದೆಯೇ ಸುಂಟಿಕೊಪ್ಪಕ್ಕೆ ತೆರಳಿ ಅವರೇ ಖುದ್ದಾಗಿ ವಾಹನದಲ್ಲಿ ಕೂರಿಸಿ ಬೆಂಗಳೂರಿನತ್ತ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ನವೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ ಎಂದು ನವೀನ್ ಅವರ ಸಹೋದರ ವಿನ್ಯಾಸ್ ಮಾಹಿತಿ ‌ನೀಡಿದ್ದಾರೆ. ಸದ್ಯ ನವೀನ್ ಅವರು ಎಲ್ಲಿದ್ದಾರೆ ಎನ್ನುವುದು ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

ಒಂದು ಕಡೆ ತಂದೆ – ಅತ್ತೆ, ಇನ್ನೊಂದೆಡೆ ಹೆಂಡತಿ ಹಾಗೂ ಪೊಲೀಸ್ ಆನಂದನ ನವರಂಗಿ ಆಟಕ್ಕೆ ಉದ್ಯಮಿ ನವೀನ್ ಬಲಿಪಶು ಆಗಿರುವುದಂತೂ ಖಂಡಿತ.

About The Author

Leave a Reply

Your email address will not be published. Required fields are marked *

You cannot copy content of this page.