ಕಾಂತಾರ-2 ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್..! ಇದು ಸಿಕ್ವೆಲ್ ಅಲ್ಲ ಪ್ರೀಕ್ವೆಲ್ – ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ-2 ಚಿತ್ರದ ಹೊಸ ಸುದ್ದಿ ಹರಿದಾಡುತ್ತಿದ್ದು, ಇದು ಸಿನಿಮಾದ ಮುಹೂರ್ತಕ್ಕೆ ಸಂಬಂಧಿಸಿದ್ದೇ ಆಗಿದೆ. ಕಾಂತಾರ ರಿಲೀಸ್ ಆಗಿ ಹಿಟ್ ಆದ್ಮೇಲೆ ಎಲ್ಲೆಡೆ ಈ ಚಿತ್ರದ ಪಾರ್ಟ್-2 ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಅದೇ ಸರಿಯಾದ ಸಮಯಕ್ಕೆ ರಿಷಬ್ ಶೆಟ್ಟಿ ಒಂದು ಮಾಹಿತಿ ನೀಡಿದ್ದರು. ಇದು ಕಾಂತಾರ ಸಿನಿಮಾದ ಕಥೆ ಮುಂದುವರೆಯುತ್ತಿದ್ದು, ಆದರೆ ಅದು ಸಿಕ್ವೆಲ್ ಆಗಿ ಅಲ್ವೇ ಅಲ್ಲ.

ನಟ ರಿಷಬ್‌ ಶೆಟ್ಟಿ ಈ ಹಿಂದೆ, ಕಾಂತಾರ-2 ಸಿನಿಮಾ ಪ್ರೀಕ್ವೆಲ್ ಆಗಿಯೇ ಬರುತ್ತದೆ. ಇಲ್ಲಿವರೆಗೂ ನೀವೂ ನೋಡಿರೋದು ಪಾರ್ಟ್-2 ಸಿನಿಮಾನೆ ಆಗಿದೆ. ಆದರೆ ಇನ್ಮುಂದೆ ಬರೋದು ಕಾಂತಾರ ಪ್ರೀಕ್ವೆಲ್ ಕಥೆ ಅಂತಲೇ ಹೇಳಿಕೊಂಡಿದ್ದರು. ಸದ್ಯ ಕಾಂತಾರ ಪ್ರೀಕ್ವೆಲ್‌ ಚಿತ್ರದ ಕೆಲಸ ನಡೆಯುತ್ತಿದ್ದು, ಒಂದು ಇಡೀ ಟೀಮ್ ಸಂಶೋಧನೆ ಮಾಡಿ, ಅವಶ್ಯಕ ತಯಾರಿಯನ್ನೂ ನಡೆಸಿಕೊಂಡಿದೆ. ಈ ಸಂಶೋಧನಾ ತಂಡದ ಜೊತೆಗೆ  ರಿಷಬ್‌ ಶೆಟ್ಟಿ ಸಹ ಕುಳಿತು,  ತಾವು ಅಂದುಕೊಂಡಂತೆ ಆ ಕಥೆಗೆ ಒಂದು ರೂಪ ಕೊಟ್ಟಿದ್ದಾರೆ.

ಇದೀಗ ರಿಷಬ್ ಶೆಟ್ಟಿಯ ಕಾಂತಾರ ಪ್ರೀಕ್ವೆಲ್ ಕಥೆಯ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡು, ಡೈಲಾಗ್ ವರ್ಶನ್‌ಗೆ ಬಂದಿದ್ದಾರೆ ಅನ್ನುವ ಸುದ್ದಿ ಕೂಡ ಅತಿ ಹೆಚ್ಚು ಹರಿದಾಡುತ್ತಿದೆ. ಕಾಂತಾರ-2 ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು,  ಇದೇ  ನವೆಂಬರ್-27 ರಂದು ಸಿನಿಮಾ ಮುಹೂರ್ತ ನಡೆಯಲಿದೆ. ಮುಹೂರ್ತವನ್ನ ಹೊಂಬಾಳೆ ಸಂಸ್ಥೆ ದೊಡ್ಡಮಟ್ಟದಲ್ಲಿಯೇ ಯಾವ ತಯಾರಿ ಮಾಡಿಕೊಳ್ಳದೆ, ಸಿಂಪಲ್ ಆಗಿಯೇ ಒಂದು ದೇವಸ್ಥಾನದಲ್ಲಿಯೇ ಚಿತ್ರದ ಮುಹೂರ್ತ ಪ್ಲಾನ್ ಮಾಡಿದೆ. ಆ ಪ್ರಕಾರ ಇದೀಗ ಕಾಂತಾರ ಪ್ರೀಕ್ವೆಲ್ ಇದೇ ತಿಂಗಳಿನಿಂದಲೇ ಶುರು ಆಗುತ್ತಿದೆ ಅಂತಲೇ ಹೇಳಬಹುದು. ರಿಷಬ್ ಶೆಟ್ಟಿ ಎಲ್ಲ ತಯಾರಿ ನಡೆಸುವುದರ ಜೊತೆಗೆ, ತಮ್ಮ ಲುಕ್ ಅನ್ನು ಕೂಡ ಬದಲಿಸಿಕೊಂಡಿದ್ದು, ಮೊನ್ನೆ ರಿಷಬ್ ಶೆಟ್ರು ಒಂದು ವಿಡಿಯೋ ಕಾಲ್ ಅಲ್ಲಿ ಬಂದಿ, ಎ.ಆರ್.ರೆಹಮಾನ್ ಜೊತೆಗೆ ಕಾಂತಾರ ಕುರಿತು ಮಾತನಾಡಿದ್ದರು. ಆಗಲೇ ಎಲ್ಲರೂ ರಿಷಬ್ ಹೊಸ ಲುಕ್‌ನ್ನು ಗಮನಿಸಿದ್ದು, ಇದರ ಹೊರತಾಗಿ ಈ ನಟ ಕಥೆಗೆ ಬೇಕಿರೋ ರೀತಿಯಲ್ಲಿ ಹಾರ್ಸ್ ರೈಡಿಂಗ್ ಕೂಡ ಕಲಿಯುತ್ತಿದ್ದಾರೆ. ಈ ಮೂಲಕ ರಿಷಬ್ ಶೆಟ್ರು ಪಂಜುರ್ಲಿ ದೈವದ ಕಥೆಯನ್ನ ಮತ್ತೊಮ್ಮೆ ಹೇಳುತ್ತಿದ್ದಾರೆ. ಆದರೆ ಅದು ಆರಂಭದಿಂದಲೇ ಅನ್ನುವ ಸುದ್ದಿಯಾಗಿ ಕಾಂತಾರ ಪ್ರೀಕ್ವೆಲ್ ಬಗ್ಗೆ ದಿನೇ ದಿನೇ ಕುತೂಹಲ ಜಾಸ್ತಿನೇ ಆಗುತ್ತಿದೆ.

Check Also

ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್‌ಗೆ ಜಾಮೀನು

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿ 5 ಕೋಟಿಗೂ ಅಧಿಕ ಹಣ …

Leave a Reply

Your email address will not be published. Required fields are marked *

You cannot copy content of this page.