May 19, 2026
image - 2026-05-19T092008.687

ಮಂಗಳೂರು:  ಬಳ್ಳಾರಿ ಮೂಲದ  ರಕ್ಷಿತಾ ಎಂ(21) ಎಂಬವರು  ಪ್ರಸ್ತುತ ನಗರದ ಬಂಗ್ರ ಕೂಳೂರು ದಂಬೆಲ್‍ನಲ್ಲಿ  ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೇ 9 ರಂದು  ತನ್ನ ಮಗ ಆದರ್ಶ್(1)ನೊಂದಿಗೆ ಮನೆಯಿಂದ ಹೋದವರು ಈವರೆಗೆ ಮನೆಗೂ ಬಾರದೇ ಕಾಣೆಯಾಗಿರುವ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಣೆಯಾದವರ ಚಹರೆ : ಎತ್ತರ ಸುಮಾರು 5.0 ಅಡಿ, ಸಾಧಾರಣ ಶರೀರ, ಕೋಲು ಮುಖ ಬಲ ಕೈಯಲ್ಲಿ ಎ ಎಂಬ ಹಚ್ಚೆ ಗುರುತು ಇರುತ್ತದೆ. ಲಂಬಾಣಿ, ಕನ್ನಡ ಭಾಷೆ ಮಾತನಾಡುತ್ತಾರೆ.   ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.