May 19, 2026
IMG-20260519-WA0018

ಮಂಡ್ಯ: ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ ವಿಷಯಕ್ಕೆ ಮನೆತಲ್ಲಿ ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ಸಹೋದರಿಯರು, ಮನೆಬಿಟ್ಟು ಹೋಗಿದ್ದಾರೆ.ಹೋಗುವ ಮುನ್ನ ಭಾವುಕ ಪತ್ರವೊಂದು ಬರೆದಿಟ್ಟಿದ್ದಾರೆ. ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು ಆಘಾತಕಾರಿ ಪತ್ರ ಬರೆದಿಟ್ಟು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ

ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದ ರಾಮಚಂದ್ರ ಎಂಬುವರ ಮಕ್ಕಳಾದ ಸುಜಾತ ಮತ್ತು ರುಕ್ಮಿಣಿ ಮನೆ ಬಿಟ್ಟು ಹೋಗಿದ್ದು, ಮನೆಯಿಂದ ಹೋಗುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಅಪ್ಪ-ಅಮ್ಮ ಸ್ಸಾರಿ ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ ಅಂತಾ ನಾವು ದೂರ ಹೋಗಿ ಸತ್ತಿದ್ದೇವೆ ಸ್ಸಾರಿ ಎಂದು ಪತ್ರದಲ್ಲಿ ಬರೆದಿದ್ದು, ಈ ಪತ್ರ ಪೋಷಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಆತಂಕದಿಂದಲೇ ಪೊಲಿಸರ ಮೊರೆ ಹೋದ ಪೋಷಕರು

ಈ ಪತ್ರ ಓದಿದ ಕೂಡಲೇ ಆತಂಕಗೊಂಡ ಪೋಷಕರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳನ್ನ ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಮಕ್ಕಳು ಏನಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಂಡಿರಬಹುದೇ ಎಂದು ಕುಟುಂಬಸ್ಥರು ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾರೆ.

ಹುಟ್ಟಿಸಿ ಬೆಳೆಸಿದ ಪೋಷಕರು ಅಂದಮೇಲೆ ಮಕ್ಕಳು ತಪ್ಪು ಮಾಡಿದ್ರೆ ಬೈದು ಬುದ್ಧಿ ಹೇಳುತ್ತಾರೆ. ಆದ್ರೆ, ಮಕ್ಕಳಾದವರು, ತಂದೆ ತಾಯಿ ಬೈದರು ಎಂದು ಮನನೊಂದು ಈ ರೀತಿಯ ನಿರ್ಧಾರ ಕೈಗೊಳ್ಳುವುದು ತಪ್ಪು.

About The Author

Leave a Reply

Your email address will not be published. Required fields are marked *

You cannot copy content of this page.