May 14, 2025
WhatsApp Image 2025-04-16 at 3.28.38 PM

ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಸಡಿಲಿಸಿ, ಇದೊಂದು ಬಾರಿಗೆ 5 ವರ್ಷ 5 ತಿಂಗಳಿಗೆ ಇಳಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 3 ವರ್ಷ ಅಂಗನವಾಡಿ ಶಿಕ್ಷಣ ಪೂರೈಸಿರುವ ಹಾಗೂ 5 ವರ್ಷ 5 ತಿಂಗಳು ವಯಸ್ಸು ತುಂಬಿರುವ ಮಗು ಒಂದನೇ ತರಗತಿಗೆ ದಾಖಲಾಗಲು ಅರ್ಹವಾಗಿರುತ್ತದೆ ಎಂದು ತಿಳಿಸಿದರು.

ಒಂದನೇ ತರಗತಿಯ ದಾಖಲಾತಿಗೆ ವಯೋಮಿತಿಯ ಸಡಿಲಿಕೆ ಈ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಹಾಗೂ ಮುಂದಿನ ವರ್ಷದಿಂದ ಇದು ಮೊದಲಿನಂತೆ 6 ವರ್ಷವೇ ಆಗಿರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

 

About The Author

Leave a Reply

Your email address will not be published. Required fields are marked *

<p>You cannot copy content of this page.</p>