CM’ ಸ್ಥಾನಕ್ಕೆ ರಾಜೀನಾಮೆ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

ನವದೆಹಲಿ :ಸಿಎಂ ಹುದ್ದೆಗೆ ರಾಜಿನಾಮೆ ಘೋಷಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು ಈ ರೀತಿ ಹೇಳಿದ್ದಾರೆ.ಇನ್ನೆರಡು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ತಿಳಿಸಿದ್ದಾರೆ.

ಅಬಕಾರಿ ನೀತಿ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಮೊದಲ ಭಾಷಣದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೂಪಿಸಿರುವ ಷಡ್ಯಂತ್ರಗಳಿಂದ ಅವರ ‘ಬಂಡೆಯಂತಹ ಸಂಕಲ್ಪ’ ಮುರಿಯಲು ಸಾಧ್ಯವಿಲ್ಲ ಮತ್ತು ದೇಶಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನ್ಯಾಯಾಲಯವು ನಮ್ಮ ಪರವಾಗಿ ಎಲ್ಲವನ್ನೂ ಮಾಡಿದೆ. ನಾವು ನ್ಯಾಯಾಲಯಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನ್ಯಾಯಾಲಯ ನನಗೆ ಜಾಮೀನು ನೀಡಿದೆ, ಈಗ ಪ್ರಕರಣ ಮುಂದುವರಿಯಲಿದೆ. ನಾನು ವಕೀಲರನ್ನು ಕೇಳಿದೆ, ನ್ಯಾಯಾಲಯದಿಂದ ನಾನು ಖುಲಾಸೆಯಾಗುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮನಸ್ಸು ಮಾಡಿದ್ದೇನೆ. ಎಂದು ಅವರು ಹೇಳಿದರು.

Check Also

ಉಡುಪಿ: ಉಡುಪಿಯಲ್ಲಿ ಮತ್ತೆ ನಾಲ್ವರಿಗೆ ಕಾಲರಾ- ಒಟ್ಟು 15 ಪ್ರಕರಣ ಪತ್ತೆ

ಉಡುಪಿ: ಜಿಲ್ಲೆಯಲ್ಲಿ ಮಾರಕ ಕಾಲರಾದ 15 ಪ್ರಕರಣಗಳು ಇದುವರೆಗೆ ವರದಿಯಾಗಿವೆ. 2015ರಲ್ಲಿ ಎಂಟು ಪ್ರಕರಣಗಳು ವರದಿಯಾಗಿ ಇಬ್ಬರು ಮೃತಪಟ್ಟ ಬಳಿ …

Leave a Reply

Your email address will not be published. Required fields are marked *

You cannot copy content of this page.