ಮಂಗಳೂರು: ಬಸ್ ಗಳ ಮಧ್ಯೆ ಭೀಕರ ಅಪಘಾತ..!

ಮಂಗಳೂರು : ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದ ಘಟನೆ ಜ್ಯೋತಿ ಸರ್ಕಲ್ ಬಳಿ ಇಂದು ಬೆಳಗ್ಗೆ ನಡೆದಿದೆ. 

ಅಪಘಾತದಲ್ಲಿ ಎರಡು ಬಸ್ಸುಗಳಿಗೆ ಹಾನಿ ಉಂಟಾಗಿದ್ದು, ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಠಾಣೆ ಪೊಲೀಸರು ಬಸ್ಸುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Check Also

ವಿಟ್ಲ: ಅಡಿಕೆಮರ ಮುರಿದು ಬಿದ್ದು ಮಹಿಳೆ ಮೃತ್ಯು

ವಿಟ್ಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಮುರಿದು ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮೃತ …

Leave a Reply

Your email address will not be published. Required fields are marked *

You cannot copy content of this page.