

ಪುತ್ತೂರು: ಪುತ್ತೂರು ಮೂಲದ ವಿದ್ಯಾರ್ಥಿಯೋರ್ವ ಅಮೆರಿಕಾದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ದಾರುಣವಾಗಿ ಮೃತಪಟ್ಟ ಘಟನೆ ಡಿ.9ರಂದು ನಡೆದಿದೆ.
ಬನ್ನೂರು ನಿವಾಸಿ ಮೈಸೂರಿನಲ್ಲಿ ಹಿರಿಯ ಹೋಟೆಲ್‌ನಲ್ಲಿ ಉದ್ಯಮಿಯಾಗಿದ್ದ ಅನಂತಕೃಷ್ಣರಾವ್ ಎಂಬವರ ಪುತ್ರ ಟಿ.ಎ ಸುಬ್ರಹ್ಮಣ್ಯ ಪಡ್ಡಿಲ್ಲಾಯ (30) ಮೃತಪಟ್ಟ ವಿದ್ಯಾರ್ಥಿ.
ಅವರು ಮದ್ರಾಸ್ ಐಯಟಿ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಅಮೇರಿಕಾದಲ್ಲೇ ಉನ್ನತ ಶಿಕ್ಷಣ ಪೂರೈಸಿಕೊಳ್ಳುತ್ತಿದ್ದರು ಎನ್ನಲಾಗಿದೆ.