

ಬೀಜಿಂಗ್: ಚೀನಾದಲ್ಲಿ ಮತ್ತೆ ಮಾಹಾಮಾರಿ ಕೊರೊನಾ ಅಟ್ಟಹಾಸ ಶುರುಮಾಡಿದ್ದು, ಚೀನಾದ ದಕ್ಷಿಣ ಉತ್ಪಾದನಾ ಕೇಂದ್ರವಾದ ಗುವಾಂಗ ಝೌ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಚೀನಾದಾದ್ಯಂತದ ಕೊರೊನಾ ಪ್ರಕರಣಗಳು ಕೆಲ ದಿನಗಳಿಂದ ಹೆಚ್ಚಳವಾಗುತ್ತಿದ್ದು, 50 ಲಕ್ಷ ಜನಸಂಖ್ಯೆ ಇರುವ ಗುವಾಂಗ್ ಝೌ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಕಳೆದ 6 ತಿಂಗಳಿನಿಂದ ಗುವಾಂಗ್ ಝೌ ನಗರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿವೆ.
ಗುವಾಂಗ್ ಝೌ ನಲ್ಲಿ ನಿನ್ನೆ ಒಂದೇ ದಿನ 2,637 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.