ಪುತ್ತೂರು: ಪುತ್ತೂರಿನ ರಾಮಕೃಷ್ಣ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಅನಾರೋಗ್ಯದಿಂದಾಗಿ ಇಂದು ಮೃತಪಟ್ಟಿದ್ದಾರೆ.
ಬನ್ನೂರು ಗ್ರಾಮದ ಸೇಡಿಯಾಪು ಕಂಜೂರಿನ ಆನಂದ ಕುಲಾಲ್ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕೃತಿಕಾ (13) ಮೃತ ದುರ್ದೈವಿ.
ಕೃತಿಕಾ ಪುತ್ತೂರಿನ ರಾಮಕೃಷ್ಣ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಮೃತರು ತಂದೆ-ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.