ಬೆಂಗಳೂರು: ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ, ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗೆ ತೆರಳಿ ಚಿತ್ರಗಳ ವೀಕ್ಷಿಸುವುದು ಬಹುದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ನಿಮ್ಮ ಫೋನ್ನಲ್ಲಿ ಅಶ್ಲೀಲ ವಿಡಿಯೋಗಳನ್ನ ನೋಡ್ತಾ ಇದ್ರೆ ಕಾದಿದೆ ಗ್ರಹಚಾರ..!
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಶ್ಲೀಲ ಅಥವಾ ಪೋರ್ನ್ ಸಿನಿಮಾಗಳನ್ನು ವೀಕ್ಷಿಸಿದರೆ, ಅದರಿಂದ ಎದುರಾಗುವ ತೊಂದರೆಗಳೇನೇನು ಗೊತ್ತಾ..? ಅಪಾಯಗಳ ಬಗ್ಗೆ ಗೊತ್ತಾದರೆ ಅಚ್ಚರಿಗೊಳ್ಳುತ್ತೀರಿ. ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವುದು ಕೆಲವು ಜನರಿಗೆ ಚಟ ಆಗಿರುತ್ತದೆ. ಅದನ್ನು ನೋಡಲು ಹಣವನ್ನು ಕೂಡ ಪಾವತಿಸಲು ರೆಡಿಯಾಗಿರುತ್ತಾರೆ. ಆದ್ರೆ ಇದೊಂದು ದೊಡ್ಡ ಯಾಮಾರಿಸುವ ಜಾಲ ಅನ್ನೋದನ್ನ ನಾವು ಮರೆಯಬಾರದು
ಯಾಕೆಂದರೆ ಈ ರೀತಿ ಹಣ ಕೇಳಿ ಅಶ್ಲೀಲ ಚಿತ್ರವನ್ನು ವೀಕ್ಷಿಸುವಂತೆ ಮಾಡುವವರು ನಿಮ್ಮ ಸ್ಮಾರ್ಟ್ಫೋನ್ ಒಳಗೆ ನುಗ್ಗಿ ಎಲ್ಲಾ ವಿಚಾರಗಳನ್ನ ಕದಿಯುತ್ತಾರೆ . ಬಳಿಕ ಬ್ಯಾಂಕ್ ಖಾತೆಗೆ(Bank Account) ಕನ್ನ ಹಾಕುತ್ತಾರೆ.
ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ಚಟವಾಗಿ ತಿರುಗುತ್ತದೆ. ಇದು ನಂತರದ ದಿನಗಳಲ್ಲಿ ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗುವುದು. ಟೀ, ಕಾಫೀ, ಮದ್ಯ, ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಯಾಗುತ್ತದೆ.
ಏನನ್ನ ನಾವು ಬ್ರೌಸ್ ಮಾಡುತ್ತಿದ್ದೇವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಗೂಗಲ್ ಹೊಂದಿದೆ. ನೀವು ಅಶ್ಲೀಲ ಪದಗಳ ಕುರಿತು ಸರ್ಚ್ ಮಾಡಿದರೆ ಇದರ ಆಧಾರದ ಮೇಲೆ ನೀವು ಯಾವುದೇ ಪೇಜ್ ತೆರೆದರೂ ಅದರಲ್ಲಿ ಅಶ್ಲೀಲ ಚಿತ್ರಗಳ ಕುರಿತು ಜಾಹೀರಾತುಗಳು ಕಾಣಿಸುತ್ತದೆ.