ಬೆಂಗಳೂರು :ಇನ್ಮುಂದೆ ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಇನ್ಶೂರೆನ್ಸ್ ಕ್ಯಾನ್ಸಲ್ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ..
ಪೊಲೀಸರು ವೈಟ್ ಮತ್ತು ಯೆಲ್ಲೋ ಬೋರ್ಡ್ ವಾಹನಗಳ ದಂಡ ವಸೂಲಿಗೆ ಮುಂದಾಗಿದ್ದಾರೆ. ದಂಡ ಬಾಕಿ ಉಳಿಸಿಕೊಂಡ ವೈಟ್ ಬೋರ್ಡ್ ವಾಹನಗಳ ಇನ್ಶೂರೆನ್ಸ್ ಗೆ ಬೀಳುತ್ತೆ ಕೊಕ್ಕೆ. ಪ್ರತಿ ವರ್ಷ ವಾಹನದ ಇನ್ಶೂರೆನ್ಸ್ ಗೆ ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್ ಓಸಿ ಕೊಡಬೇಕು. ಎನ್ ಓಸಿ ಕೊಡದಿದ್ದಲ್ಲಿ ಇನ್ಶೂರೆನ್ಸ್ ರಿನಿವಲ್ ಅಗದೇ ಇರುವಂತೆ ಮಾಡಲು ಫ್ಲಾನ್ ಮಾಡಲಾಗಿದ್ದು, ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಒಂದೆಡೆ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ನಿಯಮ ಉಲ್ಲಂಘನೆ ಕೇಸ್ ಹೆಚ್ಚಾಗುತ್ತಿದೆ ಈ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ಕೇಸ್‌ಗಳು ದಾಖಲಾಗುತ್ತಿವೆ.