ಬೆಂಗಳೂರು: ತಾಯಿಯೊಬ್ಬಳು ನಾಲ್ಕನೇ ಮಹಡಿಯ ಮೇಲಿಂದ ಮಗುವನ್ನುಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಂಗಿ ರಾಮನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ
ಅಗಸ್ಟ್‌ನಲ್ಲಿ ಹೆತ್ತ ತಾಯಿಯೇ ತನ್ನ ಮಗುವನ್ನು (Daughter) ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದ ಘಟನೆ ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಮಗುವಿನ ತಾಯಿ ಸುಷ್ಮಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಈಕೆ ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಸುಷ್ಮಾ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿದ್ದರೆ ಲೈಫ್ ಎಂಜಾಯ್ ಮಾಡಲಾಗುವುದಿಲ್ಲ ಎಂದು ಮಗುವನ್ನು ಕೊಲೆ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 193 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಚಾರ್ಜ್ ಶೀಟ್‍ನಲ್ಲಿ ಏನಿದೆ?: ಸುಷ್ಮಾ ತನ್ನ ಮಗುವನ್ನು ಮಹಡಿಯಿಂದ ಬಿಸಾಡಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದ ಮೂವರ ಹೇಳಿಕೆ ದಾಖಲು ಮಾಡಿದ್ದಾರೆ. ಅಲ್ಲದೇ ಕೇಸ್‍ನಲ್ಲಿ ಬರೋಬ್ಬರಿ 34 ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ. ಇದರ ಜೊತೆಗೆ ಮಗುವಿನ ಖಾಯಿಲೆ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.
4 ವರ್ಷದ ಹೆಣ್ಣು ಮಗು ಬುದ್ಧಿಮಾಂದ್ಯ ಮಗುವಲ್ಲ. ಆ ಮಗು ಆಟಿಸಂ (AUTISM) ಎಂಬ ಖಾಯಿಲೆಯಿಂದ ಬಳಲುತ್ತಿತ್ತು. ಇದರಿಂದಾಗಿ ಪ್ರತಿನಿತ್ಯ ಥೆರಪಿ ಮಾಡಿಸಲು ಮಗುವನ್ನು ತಾಯಿ ಸುಷ್ಮಾ ಕರೆದೊಯ್ಯುತ್ತಿದ್ದಳು. ಹೀಗೆ ಮಗುವನ್ನ ದಿನಾ ಆಸ್ಪತ್ರೆಗೆ ಕರೆದೊಯ್ಯಬೇಕಲ್ಲ ಎಂದು ಸುಷ್ಮಾ ಬೇಸತ್ತಿದ್ದಳು.
ಅಷ್ಟೇ ಅಲ್ಲದೇ ಮಗುವನ್ನು ನೋಡಿಕೊಳ್ಳಲಾಗುವುದಿಲ್ಲ ಜೊತೆಗೆ ತನ್ನ ಲೈಫ್ ಎಂಜಾಯ್ ಮಾಡಲು ಆಗುವುದಿಲ್ಲ ಎಂದು ನಿರ್ಧಾರ ಮಾಡಿ, ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿ, ಅಡ್ಡಲಾಗಿದ್ದ ಮರವನ್ನು ಗಮನಿಸಿದ್ದಾಳೆ. ಆ ಬಳಿಕ ದೂರ ಬಂದು ಗಟ್ಟಿ ನೆಲದ ಸ್ಥಳವನ್ನು ನೋಡಿ ಬಿಸಾಡಿದ್ದಾಳೆ