ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನ.7ರಂದು ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಹೈನುಗಾರ ರೈತರಿಂದ ಖರೀದಿಸುವ ಹಾಲಿನ ದರ ಕನಿಷ್ಠ ಐದು ರೂಪಾಯಿ ಕೂಡಲೇ ಏರಿಸಬೇಕೆಂದು ಸಹಕಾರ ಭಾರತಿ ವತಿಯಿಂದ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರು ಸಿಎಂ ಗೆ ಮನವಿಯನ್ನು ಸಲ್ಲಿಸಲಾಯಿತು.
ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದರ ಒಕ್ಕೂಟದ ರಚನೆ ಮತ್ತು ಸಾಲ ಮನ್ನ ಯೋಜನೆಯಲ್ಲಿ ಬಾಕಿ ಉಳಿದಿರುವ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ , ಸಹಕಾರ ಭಾರತಿ ಹಾಲು ಪ್ರೊಕೋಸ್ಟದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ , ಸಂಚಾಲಕ ಕೆ ಕಮಲಾಕ್ಷಿ ಹೆಬ್ಬಾರ್ , ಮಹಿಳಾ ಪ್ರಮುಖ ವಿದ್ಯಾ ವಿಚಿತ್ರ ವಿಜೇತ್ ಪೈ ಇದ್ದರು.