ಸುರತ್ಕಲ್: ಹಠಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಂಚಾರದಲ್ಲಿದ್ದ ಐಷಾರಾಮಿ ಕಾರು ಸುಟ್ಟು ಕರಕಲಾದ ಘಟನೆ ಸುರತ್ಕಲ್ ಎನ್ಐಟಿಕೆ ಹಳೆ ಟೋಲ್ ಗೇಟ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಸುಟ್ಟು ಕರಕಲಾಗಿದ್ದು ಬಿಎಂಡಬ್ಲ್ಯೂ ಕಾರೆಂದು ಹೇಳಲಾಗುತ್ತಿದ್ದು, ಕಾರು ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಎನ್ಐಟಿಕೆ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಬೆಂಕಿ ಅವಘಡದಲ್ಲಿ ಸಾವು ನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ. ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿ ಶಾಮಕ ದಳಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
Check Also
ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ …