ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲಸ ಹುಡುಕೋದು ಸಿಕ್ಕಾಪಟ್ಟೆ ಕಷ್ಟ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಟೆಕ್ಕಿಯೊಬ್ಬ ಯುವತಿಯರ ಜೊತೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ಸಾಮಾಜಿಕ ಜಾಲಾತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಳ್ಳುತ್ತಾ ಇದ್ದ ಟೆಕ್ಕಿ ದಿಲೀಪ್ ಬಂಧನ ಆಗಿದೆ. ಇನ್‍ಸ್ಟಾಗ್ರಾಂನಲ್ಲಿ ಹುಡುಗಿಯರ ಹೆಸರನ್ನು ಇಟ್ಟುಕೊಂಡು ಹುಡುಗಿಯರ ಪರಿಚಯ ಮಾಡಿಕೊಂಡು ಬಳಿಕ ಕೆಲಸ ಕೊಡಿಸ್ತೀನಿ ಅಂತ ಮೋಸ ಮಾಡ್ತಾ ಇದ್ದ. ಬಳಿಕ ಓಯೋ ರೂಂಗೆ ಕರೆದು ಯುವತಿಯರ ಬೆದರಿಸಿ ಸೆಕ್ಸ್ ಮಾಡ್ತಾ ಇದ್ದ. ಜೊತೆಗೆ ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ರೀತಿ 12 ಹುಡುಗಿಯರಿಗೆ ಮಾಡಿದ್ದಾನೆ ಎಂಬುದು ಗೊತ್ತಾಗಿದ್ದು, ಆರೋಪಿ ದಿಲೀಪ್ ಬಂಧಿಸಿ ವಿಚಾರಣೆ ನಡೆಸ್ತಾ ಇದ್ದಾರೆ.