ಬೆಂಗಳೂರು; ರಾಜ್ಯ ಸರ್ಕಾರದಿಂದ 10 ಮುಸ್ಲಿಂ ಕಾಲೇಜ್ ಆರಂಭಿಸಲು ಮುಂದಾಗಿರುವ ಬಗ್ಗೆ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರದ ನಿರ್ಧಾರ ಖಂಡನೀಯ ಇದನ್ನು ಬಲವಾಗಿ ವಿರೋಧಿಸುತ್ತೇನೆ. ಎಲ್ಲಾ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಹೋರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ತುಷ್ಠೀಕರಣ ಮಾಡಿತ್ತು. ಅದರಿಂದಾಗಿ ಭಯೋತ್ಪಾದನೆ, ಮತಾಂಧತೆ, ಲವ್ ಜಿಹಾದ್, ಗೋ ಹತ್ಯೆಯಂಥವುಗಳು ಆಗಿವೆ.ಬಿಜೆಪಿಯವರೂ ತುಷ್ಠೀಕರಣ ಮಾಡುತ್ತಿದ್ದಾರೆ. ಹತ್ತು ಮುಸ್ಲಿಂ ಕಾಲೇಜ್ ಕೊಡುವುದು ತಪ್ಪು.ಪ್ರತ್ಯೇಕತೆ ಬಿಂಬಿಸುತ್ತಿರುವುದು ತಪ್ಪು.ಈ ನಿರ್ಧಾರ ವಾಪಸ್ ಪಡೆಯಬೇಕು ಎಂದಿದ್ದಾರೆ. ನಮ್ಮ ಬಲಿದಾನವಾದರೂ ಮುಸ್ಲಿಂ ಕಾಲೇಜ್‌ಗೆ ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.