ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಎಸ್ ಕೆಪಿಎ ಉಡುಪಿ ವಲಯದಿಂದ ಗೌರವಾಭಿನಂದನೆ

ಉಡುಪಿ: ಇತ್ತೀಚಿಗೆ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಛಾಯಾಗ್ರಾಹಕರ ಸಂಘಟನೆಗೆ ಮೊದಲಿನಿಂದಲೂ ಸಹಾಯ, ಸಹಕಾರ ನೀಡಿದ ಇಂದ್ರಾಳಿಯವರಿಗೆ ಸರ್ವ ಛಾಯಾಗ್ರಾಹಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ , ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕರೆ, ಉಪಾಧ್ಯಕ್ಷ ಸುರಭಿ ಸುಧೀರ್, ಸಂಚಾಲಕ ಸಂತೋಷ್ ಕೋರಂಗ್ರಪಾಡಿ, ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಕಾರ್ಯದರ್ಶಿ ಪ್ರವೀಣ್ ಕೋರೆಯ, ದಿವಾಕರ್ ಹಿರಿಯಡ್ಕ , ಮಾಜಿ ಅಧ್ಯಕ್ಷರುಗಳಾದ ಸುಕುಮಾರ್ ಕುಕ್ಕಿಕಟ್ಟೆ, ಯು ಕೆ.ಭಾಸ್ಕರ್,ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕ ಮಠ, ಶ್ರೀಶ ಬಲ್ಲಾಳ್, ರಮೇಶ್ ಭಟ್, ರಾಮಾಂಜಿ, ಸುಕೇಶ್ ಕೆ ಅಮೀನ್, ನಾರಾಯಣ ಜತ್ತನ್ ಹಾಗು ದಯಾನಂದ ನಿಟ್ಟೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Check Also

ಉಡುಪಿ : ರಘುಪತಿ ಭಟ್ ಅವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ- ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಉಡುಪಿ : ರಘುಪತಿ ಭಟ್ ಅವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ. ಸಾಕಷ್ಟು ಬಾರಿ ಅವಕಾಶ ಸಿಕ್ಕಿದೆ. ಇನ್ನೂ ಅನೇಕರಿಗೆ …

Leave a Reply

Your email address will not be published. Required fields are marked *

You cannot copy content of this page.