ಉಡುಪಿ:ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ವಿಜೇತರಾಗಿದ್ದೀರಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದೀಚ್ಚಾ ಪರೇಶ್ ಕಾಮತ್ ಎಂಬವರಿಗೆ ಯಾರೋ ಕರೆ ಮಾಡಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದರು.
ಗಿಫ್ಟ್ ಕಳುಹಿಸಲು ಬ್ಯಾಂಕ್ ಖಾತೆ ನೀಡಿ ಇದಕ್ಕೆ ಹಣ ವರ್ಗಾಯಿಸುವಂತೆ ತಿಳಿಸಿದ್ದು, ಅದರಂತೆ ಒಟ್ಟು 33,998 ರೂ. ಪಾವತಿಸಿ, ಗಿಫ್ಟ್ ಹಾಗೂ ಹಣ ಹಿಂದೆ ಕೊಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.