ಮಂಗಳೂರು: ದ್ವಿಚಕ್ರ ವಾಹನ ಕಳ್ಳನೋರ್ವನ ಬಂಧನ…!!

ಮಂಗಳೂರು: ನಗರದ ಬಜಪೆ ಸಮೀಪ ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬಜಪೆ ಠಾಣೆಯ ಎಎಸ್‌ಐ ರಾಮ ಪೂಜಾರಿ ಮತ್ತು ಸಿಬಂದಿ ಸ್ವಾಮಿಲಪದವು ಎನ್ನುವಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ ‌
ಬಂಧಿತ ಆರೋಪಿ ಉಡುಪಿ ಜಿಲ್ಲೆಯ ಕುಂದಾಪುರ ಸಾಸ್ತಾನದ ಗೋಳಿಬೆಟ್ಟುಮನೆಯ ಪ್ರಹ್ಲಾದ್‌ (30) ಎಂದು ತಿಳಿಯಲಾಗಿದೆ ‌
ಮುಂಜಾನೆ ವಾಹನ ತಪಾಸಣೆ ಮಾಡುತ್ತಿರುವಾಗ ಸ್ಕೂಟರ್‌ ಅನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಇದ್ದು, ಆಗ ಆತನನ್ನು ಹಿಡಿದು ವಿಚಾರಿಸಿದಾಗ ಸ್ಕೂಟರ್‌ ಅನ್ನು ಬಂಟ್ವಾಳದ ಮೆಲ್ಕಾರ್‌ ಎಂಬಲ್ಲಿಂದ ಕಳವು ಮಾಡಿದಾಗಿ ತಿಳಿಸಿದ್ದ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಹಿಂದೆ ಕುಂದಾಪುರ, ಮಂಗಳೂರು ಉತ್ತರ, ಕೋಟ, ಬ್ರಹ್ಮಾವರ, ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಳ್ಳತನಕ್ಕೆ ಹಾಗೂ ಬೈಕ್‌ ಕಳ್ಳತನಕ್ಕೆ ಸಂಬಂಧಪಟ್ಟ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಎನ್ನಲಾಗಿದೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.