December 22, 2024
WhatsApp Image 2023-01-25 at 11.49.48 AM

ಮಂಗಳೂರು: ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ, ಆಧುನಿಕ ಜಗತ್ತಿನ ಸವಾಲನ್ನು ಎದುರಿಸಲು ಡಿಜಿಟಲ್ ಗ್ರಂಥಾಲಯ ಸಹಕಾರಿ. ಡಿಜಿಟಿಲ್ ಗ್ರಂಥಾಲಯದಲ್ಲಿರುವ ಸಂಪನ್ಮೂಲವನ್ನು ಉಪಯುಕ್ತವಾಗಿ ಬಳಸಿಕೊಳ್ಳಿ ಎಂದು ಎ.ವಿ ಬಾಳಿಗಾ ಕಾಲೇಜಿನ ಗ್ರಂಥಪಾಲಕರಾದ ಡಾ| ಶಿವಾನಂದ ಬುಳ್ಳ ಅವರು ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಾಲಯ ಹಾಗೂ ರೀಡರ್ಸ್ ಕ್ಲಬ್ ಇದರ ಸಹಯೋಗದಲ್ಲಿ ಆಯೋಜಿಸಲಾದ ಡಿಜಿಟಿಲ್ ಗ್ರಂಥಾಲಯದ ಉದ್ಟಾಟನೆ ಹಾಗೂ ಕಾರ್ಯಗಾರವನ್ನು ಉದ್ಟಾಟಿಸಿ ಮಾತನಾಡಿದರು.

ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಹಾಗು ಸಂಚಾಲಕರಾದ ಡಾ| ಮಂಜುಳಾ ಕೆ.ಟಿ ಮಾತನಾಡಿ ಶರವೇಗದಲ್ಲಿ ಮಾಹಿತಿ ದೊರೆಯುವುದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸದಿಂದ ವಿಮುಖರಾಗುತ್ತಿದ್ದಾರೆ. ಕಾಲೇಜಿನ ಗ್ರಂಥಾಲಯದಲ್ಲಿ, ಅತ್ಯುತ್ತಮ ಪುಸ್ತಕಗಳನ್ನೊಳಗೊಡಿದ್ದು ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಕಾಲೇಜಿನ ನೂತನ ಡಿಜಿಟಲ್ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಮುಖ್ಯಗ್ರಂಥಪಾಲಕ ಲೋಕರಾಜ್ ಎ. ಎಸ್ ವಿಟ್ಲ ಸ್ವಾಗತಿಸಿದರು. ರೀಡರ್ಸ್ ಕ್ಲಬ್ ನ ಸಯೋಜಕಿ ಕುಮಾರಿ ಮಾಯ ಕುಡ್ವ ವಂದಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.