December 22, 2024
WhatsApp Image 2023-01-25 at 4.10.33 PM

ಉಡುಪಿ : ಉಡುಪಿಯ ಜಿಲ್ಲೆಯ ಮಲ್ಪೆಯ ಕಡಲ ತೀರದಲ್ಲಿ ಅಪರೂಪದ ಬಂಗಾರ ವರ್ಣದ ಅಂಜಲ್ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಸ್ವರ್ಣ ಬಣ್ಣದ ಹೊಂದಿರುವ ಈ ಅಂಜಲ್ ಮೀನು ಸುಮಾರು 16 ಕೆಜಿ ತೂಗುತ್ತದೆ.

ಮಲ್ಪೆ ಕಡಲಿನಲ್ಲಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬಲೆಗೆ ಈ ಮೀನು ಸಿಕ್ಕಿ ಹಾಕಿಕೊಂಡಿದೆ. ಇನ್ನು ಈ ಮೀನು ಮಲ್ಪೆ ಬಂದರಿನಲ್ಲಿ ಕೆ.ಜಿಗೆ 600 ರೂಪಾಯಿನಂತೆ ಮಾರಾಟವಾಗಿದೆ. ಮಲ್ಪೆಯ ನಿವಾಸಿಯಾಗಿರುವ ಸುರೇಶ್ ಎಂಬವರು ಈ ಮೀನನ್ನು ಒಟ್ಟು 9,600 ಕೊಟ್ಟು ಖರೀದಿ ಮಾಡಿದ್ದಾರೆ . ಬಂಗಾರ ಬಣ್ಣದ ಅಂಜಲ್ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡು ಬರುತ್ತದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತಜ್ಞರು ಪ್ರಾಕೃತಿಕ ವೈಚಿತ್ರದಿಂದಾಗಿ ಇಲ್ಲವೇ ಆನುವಂಶಿಕದಿಂದಾಗಿಯೂ ಮೀನಿಗೆ ಬಂಗಾರದ ಬಣ್ಣ ಬರಲು ಸಾಧ್ಯವಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.