ಕಡಬ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಸಮೀಪದ ಬಳ್ಪ ಗ್ರಾಮದ ಯುವತಿಯೊಬ್ಬಳು ವಾರದ ಹಿಂದೆ ನಾಪತ್ತೆಯಾಗಿದ್ದು ಮಂಗಳೂರಿನಲ್ಲಿ ಆಕೆ ಇರುವ ಬಗ್ಗೆ ಸುಳಿವು ಸಿಕ್ಕಿದೆ.
ಬಳ್ಪ ಗ್ರಾಮ ಬೀದಿಗುಡ್ಡೆ ಸಮೀಪದ ದೀಕ್ಷಾ (18 ) ಎಂಬಾಕೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯುವತಿ ಮಂಗಳೂರಿನಲ್ಲಿರುವ ಮಾಹಿತಿ ಪಡೆದು ಪೋಲೀಸರು ಅಲ್ಲಿಗೆ ಹೋದಾಗ ಆಕೆ ಅಲ್ಲಿಂದ ಬೇರೆಡೆಗೆ ಹೋಗಿರುವುದಾಗಿ ಗೊತ್ತಾಯಿತೆಂದು ತಿಳಿದುಬಂದಿದೆ.ಪೊಲೀಸರು ಆಕೆಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿರುವುದಾಗಿ ತಿಳಿದು ಬಂದಿದೆ.