

ಬೆಳ್ತಂಗಡಿ: 19 ವರ್ಷದ ಗರ್ಭಿಣಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ.
ಆದರ್ಶ ನಗರದ ಹಮೀದ್, ನರೀಮರವರ 2ನೇ ಪುತ್ರಿ ನಿಶ್ಚಾ (19) ಮೃತ ಗರ್ಭಿಣಿ. ಹೃದಯಾಘಾತದಿಂದ ತಮ್ಮ ಗಂಡನ ಮನೆಯಲ್ಲಿ ನಿಧನರಾಗಿದ್ದಾರೆ. ಮೃತ ಮಹಿಳೆ ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ಅವರ ಸೊಸೆ. ಇವರಿಗೆ ಮದುವೆಯಾಗಿ 7 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು. ಎನ್ನಲಾಗಿದೆ.