

ಪಡುಬಿದ್ರಿ : ಖಾಸಗಿ ಬಸ್ ಡ್ರೈವರ್ ಬಸ್ ನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸೀದ ಹೋಗಿ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಈ ಗಲಾಟೆ ನಡೆದಿದೆ. ಟೈಮಿಂಗ್ ಕುರಿತಾಗಿ ನಡೆದಿದ್ದ ಗಲಾಟೆ ಪಡುಬಿದ್ರಿ ತಲುಪಿದ ವೇಳೆ ಜೋರಾಗಿದೆ. ಸರ್ವಿಸ್ ಬಸ್ ಎಂಎಂಎಸ್ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ಬಸ್ ನ್ನು ರಸ್ತೆ ಅಡ್ಡಲಾಗಿ ನಿಲ್ಲಿಸಿ ಸೀದಾ ಬಸ್ ಸ್ಟ್ಯಾಂಡ್ ಗೆ ತೆರಳಿ ಕುತಿದ್ದಾನೆ. ಸುಮಾರು 5 ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ – ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಇದೀಗ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರಗಳು ದಾಖಲಾಗಿದೆ.